This is the title of the web page
This is the title of the web page

Please assign a menu to the primary menu location under menu

Local News

ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ


ಬೆಳಗಾವಿ ೨೬: ಶನಿವಾರದಂದು ರುಕ್ಮೀಣಿ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕೆ.ಎಲ್.ಇ ಸಂಶೋಧನಾ ಕೇಂದ್ರ, ಜೆ. ಎನ್. ಮೆಡಿಕಲ್ ಕಾಲೇಜ ಹಾಗೂ ಅನಿಲ ಬೆನಕೆ ಪೌಂಡೇಶನ ಹಾಗೂ ಬೆಳಗಾವಿ ಉತ್ತರ ಮತಕ್ಷತ್ರದ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ನಗರ ಸೇವಕರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಒಟ್ಟು ೧೪ ಸ್ಥಳಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜನೆ ಏರ್ಪಡಿಸಲಾಗಿದೆ. ಈಗ ಸದ್ಯ ರುಕ್ಮೀಣಿ ನಗರದಲ್ಲಿ ಶಿಬಿರ ಆಯೋಜನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಚವ್ವಾಟ ಗಲ್ಲಿ, ಗಾಂಧಿ ನಗರ, ಶಿವಾಜಿ ನಗರ, ಪುಲಭಾಗ ಗಲ್ಲಿ, ಭಾಂದುರ ಗಲ್ಲಿ, ಸದಾಶಿವ ನಗರ ಹೀಗೆ ಇನ್ನಿತರೆ ಪ್ರದೇಶಗಳಲ್ಲಿಯು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗುವುದು. ಶಿಬಿರದಲ್ಲಿ ಉಚಿತ ಔಷಧಿ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಈ ಶಿಬಿರದಲ್ಲಿ ತಜ್ಞ ವೈದ್ಯರುಗಳು ವೈದ್ಯಕೀಯ ಶಸ್ತ್ರ ಚಿಕಿತ್ಸೆ, ಎಲುಬು, ಕೀಲು ಮತ್ತು ಮರುಜೋಡಣೆ, ಸ್ತ್ರೀರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ನೇತ್ರ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ, ಚರ್ಮರೋಗ, ಶ್ವಾಸಕೋಶ, ಹೃದಯ ರೋಗ, ಮೂತ್ರಕೋಶ ಶಸ್ತ್ರಚಿಕಿತ್ಸೆಗೆ ಉಚಿತ ತಪಾಸಣೆ ಮತ್ತು ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ, ನಗರ ಸದಸ್ಯರಾದ ರಾಜು ಢೋಣಿ, ಶ್ರೇಯಸ್ ನಾಕಾಡಿ, ಮುಖಂಡರುಗಳಾದ ಬಸವರಾಜ ಅಂಚಿ, ಶಿರಗುಪ್ಪಿ ಶೆಟ್ಟರ, ಗೋಪಾಲ ಖಟಾವಕರ, ಸವಿತಾ ಗುಡ್ಡಾಕಾಯು, ಲಕ್ಷ್ಮೀ ನಾಯಕ್, ಅಫಜಲಖಾನ್ ಪಠಾಣ, ಶಾಲೆಯ ಪ್ರಾಚಾರ್ಯ ಆರ್. ಎಚ್. ಅಳವಣಿ, ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply