This is the title of the web page
This is the title of the web page

Please assign a menu to the primary menu location under menu

Crime NewsLocal News

ಗೂರುಜಿ ಹತ್ಯೆ ಮಾಡಿದವರ ಬಂಧನ, ರಾಮದುರ್ಗದಲ್ಲಿ ಭಾರಿ ಕಾರ್ಯಾಚರಣೆ


ಬೆಳಗಾವಿ: ಚಂದ್ರಶೇಖರ್ ಗುರೂಜಿ ಕೊಲೆಮಾಡಿದ ಅರೋಪಿಗಳನ್ನು ರಾಮದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಧಾರುಣ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ಹುಬ್ಬಳ್ಳಿ ಖಾಸಗಿ ಹೋಟೆಲಿನಲ್ಲಿ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರನ್ನು ಕೊಲೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿರುವ ಆರೋಪಿಗಳನ್ನು ಇಂದು ರಾಮದುರ್ಗದ ಪೊಲೀಸ್ ಅಧಿಕಾರಿಗಳಾದ DYSP ಆದ ರಾಮನಗೌಡ ಹಟ್ಟಿ ಇವರ ಸಮ್ಮುಖದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ಬಂಧಿಸಿದ್ದಾರೆ.

ಗೂರುಜಿ ಆಪ್ತರುಗಳಾಗಿದ್ದ ಮಹಾಂತೇಶ ಶಿರೋಳ, ಮಂಜುನಾಥ್ ದುಮ್ಮವಾಡ ಹತ್ಯೆಗೈದ ಆರೋಫಿಗಳಾಗಿದ್ದು ಹುಬ್ಬಳ್ಳಿಯಲ್ಲಿ ದುಷ್ಕೃತ್ಯ ಮೆರೆದು ತಲೆಮರೆಸಿಕೊಂಡು ರಾಮದುರ್ಗಕ್ಕೆ ಆಗಮಿಸಿದ್ದರು ಈ ವೇಳೆ ಆರೋಪಿಗಳ ಸುಳಿವು ಹಿಡಿದು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ತಮ್ಮ ವಾಹನದ ಮುಖಾಂತರ ಬೆಳಗಾವಿಗೆ ಕರೆದುಕೊಂಡು ಹೋದರು.


Gadi Kannadiga

Leave a Reply