ಬೆಳಗಾವಿ: ಕೆಪಿಸಿಸಿ ಕಾರ್ಯಧ್ಯಕ್ಷ ಶಾಸಕ ಸತೀಶ್ ಜಾರಕಿಹೊಳಿಯವರನ್ನು ಅನಾವಶ್ಯಕವಾಗಿ ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನವಾಗುತ್ತಿದೆ ಇದನ್ನು ಕೈಬಿಡಬೇಕೆಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳು ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.
ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ದಲಿತಪರ ಸಂಘಟನೆಗಳು,ರೈತ ಸಂಘಟನೆಗಳು ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದು ಪ್ರತಿಭಟನೆಯಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ಪ್ರತಿಕೃತಿ ದಹಿಸಿ ಆಕ್ರೋಷ ವ್ಯಕ್ತಿಪಡಿಸಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಾವು ಅವರ ಜೊತೆಗಿದ್ದೇವೆ ಎಂದು ಸಂದೇಶ ನೀಡಿದ್ದು
ಬುದ್ಧ ಬಸವ ಅಂಬೇಡ್ಕರ್ ಅವರ ತತ್ವಗಳನ್ನು ಮನೆಮನೆಗೆ ತೆಗೆದುಕೊಂಡು ಹೋಗುತ್ತೇವೆ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಪುಲೆ, ಶಾಹೂಮಾಹಾರಾಜ ಪಿರಿಯಾರ್ ಹಾಗೂ ಸಂವಿಧಾನ ಉಳಿಸಿ ನ್ಯಾಯಕ್ಕಾಗಿ ಹೋರಾಟ ಸತೀಶ್ ಜಾರಕಿಹೊಳಿ ಅವರ ಜೊತೆ ನಾವಿದ್ದೇವೆ ಎಂದರು.
ಯುವಕರಿಗೆ ಮಹಾಪುರುಷರಗಳ ಆದರ್ಶ ತಿಳಿಸಿಕೊಡಬೇಕಾಗಿದೆ ಹಿಂದೂ ಎಂಬ ಪದದ ಅರ್ಥವನ್ನು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಹಿಂದೂ ಮನೋವಾದಿಗಳು ಚರ್ಚೆಗೆ ಬರಬೇಕು ನಿನಾಕಾರಣ ವಿವಾದ ಸೃಷ್ಟಿ ಮಾಡಿ ಸಮಾಜದಲ್ಲಿ ದೋಷ ವಿಷ ಬೀಜ ಬಿತ್ತಬಾರದೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ ಮಾನವ ಬಂಧುತ್ವ ಬೆಳಗಾವಿ ರೈತ ಮುಖಂಡರಾದ ಮೋದಗಿ ಹೇಳಿದರು.