ಬೆಳಗಾವಿ : ಸತೀಶ್ ಜಾರಕಿಹೋಳಿ ತೇಜೋವಧೆ ಖಂಡಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಸತೀಶ್ ಜಾರಕಿಹೋಳಿ ಅಭಿಮಾನಿಗಳು ಬಳಗ ತಯಾರಿ ನಡೆಸಿದೆ. ಈ ಕುರಿತು ಅಭಿಮಾನಿಗಳು ಬಳಗದಿಂದ ಮನವಿ ಹರಿದಾಡುತ್ತಿದ್ದು, ಆ ಮನವಿ ಹೀಗಿದೆ.
ಸತೀಶ ಜಾರಕಿಹೊಳಿ ಅವರ ಹತ್ತು ಹಲವು ವರ್ಷಗಳಿಂದ ಮಾಜಿ ಸಚಿವರು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಲಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಸಾಮಾಜಿಕ ನ್ಯಾಯದ ಸಮಾನತೆಯ ಉದ್ದೇಶವನ್ನಿಟ್ಟುಕೊಂಡು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅದರ ಪ್ರಚಾರ ಪ್ರಸಾರ ಕಾರ್ಯದಲ್ಲಿ ತೊಡಗಿ ಮೌಢ್ಯತೆಯ ವಿರುದ್ಧ ರಣಕಹಳೆ ಮೊಳಗಿಸಿ ಸಮಾನತೆ ಗಾಗಿ ಹೋರಾಟ ನಡೆಸಿದ್ದರು.
ಆದರೆ ಇದನ್ನು ಸಹಿಸದ ಸಂಘಪರಿವಾರ, ಬಿಜೆಪಿ ಹಾಗೂ ಅದರ ಮುಖಂಡರು ನಿರಂತರ ಸತೀಶ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅದನ್ನು ಪ್ರಗತಿಪರ ಚಿಂತಕರು, ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ನಾಗರೀಕರು ದಲಿತ ಬಾಂಧವರು ಹಿಂದುಳಿದವರು ಅಲ್ಪಸಂಖ್ಯಾತರು ಹಾಗೂ ಇತರೇ ಸಮುದಾಯದ ಸುಸಂಸ್ಕೃತ ನಾಗರೀಕರು ಖಂಡಿಸಿದ್ದಾರೆ ಅದರ ವಿರುದ್ಧ ಸೋಮವಾರ ದಿನಾಂಕ 14-11-2022 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ನಗರದ CPED ಮೈದಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಧರಣಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ.
ಆದ್ದರಿಂದ ಬೆಳಗಾವಿ ಜಿಲ್ಲೆಯ ಸಂವಿಧಾನ ಪ್ರೀಯ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಅಭಿಮಾನಿ ಬಳಗ ಮನವಿ ಮಾಡಿದ್ದಾರೆ.