17ರಂದು ಬಸವ ಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

Murugesh Shivapuji
17ರಂದು ಬಸವ ಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
WhatsApp Group Join Now

ಬೆಳಗಾವಿ; ಕಣ್ಣೀರಿ ಮಠದ ಸ್ವಾಮೀಜಿ ವಿರುದ್ಧ ಸಮಸ್ತ ಬಸವ ಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ದಿನಾಂಕ 17ರಂದು ಮುಂಜಾನೆ 11:00 ಗಂಟೆಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ತಿಳಿಸಿದ್ದಾರೆ.
ಇತ್ತೀಚಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಸಂಸ್ಕೃತಿ ಅಭಿಯಾನವನ್ನು ಟೀಕಿಸಿ ಅದರಲ್ಲಿ ಭಾಗವಹಿಸಿದ್ದ 300ಕ್ಕೂ ಅಧಿಕ ಮಠಾಧಿಪತಿಗಳನ್ನು ಅವಾಚ್ಯ ಶಬ್ದಗಳಿಂದ ಅಸಂವಿಧಾನಿಕ ಶಬ್ದಗಳನ್ನು ಬಳಸಿ ಅತ್ಯಂತ ಹೇಯವಾಗಿ ನಿಂದಿಸಿದ್ದನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ನಡೆದ ಬಸವಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬೃಹ ಪ್ರತಿಭಟನೆಯಲ್ಲಿ ಸಮಸ್ತ ಬಸವ ಅಭಿಮಾನಿಗಳು ಭಾಗವಹಿಸಬೇಕೆಂದು ಒಕ್ಕೂಟದ ಪರವಾಗಿ ಲಿಂಗಾಯತ ಮಹಾಸಭೆಯ ಸಮಸ್ತ ಪದಾಧಿಕಾರಿಗಳು ಕರೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಈರಣ್ಣ ದೇಯಣ್ಣವರ, ಮುರುಗೇಶ್ ಶಿವಪೂಜಿ, ಸತೀಶ್ ಚೌಗುಲಾ, ಪ್ರವೀಣ್ ಚಿಕಲಿ, ಮೋಹನ್ ಗುಂಡ್ಲುರ್, ಸುರೇಶ್ ನರಗುಂದ, ಶ್ರೀಮತಿ ಶೋಭಾ ಶಿವಳ್ಳಿ, ಶ್ರೀಮತಿ ರಾಜಶ್ರೀ ದೇಯಣ್ಣವರ್, ನಾನಾಗೌಡ ಬಿರಾದಾರ್, ಶಿವಾನಂದ್ ವಾಗರವಾಡಿ, ಬಸವರಾಜ್ ಮಿಂಡೊಳ್ಳಿ, ಈರಣ್ಣ ಚಿನುಗುಡಿ, ಕೆಂಪಣ್ಣ ರಾಮಾಪುರಿ, ಬಿ. ಎಸ್. ಮತ್ತಿಕೊಪ್ಪ ಮತ್ತು ಬಸವರಾಜ್ ಜಮಖಂಡಿ, ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!