This is the title of the web page
This is the title of the web page

Please assign a menu to the primary menu location under menu

Local News

ಮಠಮಾನ್ಯಗಳು ದಾನ ಧರ್ಮ ಮಾಡುವಲ್ಲಿ ಮುಂಚೂಣಿಯಲ್ಲಿವೆ : ವಿಶ್ವಾಸ ವೈದ್ಯ


ಸವದತ್ತಿ : ಬಣಜಿಗ ಸಮಾಜದ ಜನರು ಸಮಾಜ ಸೇವೆ ಮಾಡುವುದರ ಜೊತೆಗೆ ಮಠಮಾನ್ಯಗಳಿಗೂ ದಾನ ಧರ್ಮ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ £ಕ್ಕಮ್ ಕಲ್ಯಾಣ ಮಂಟಪದಲ್ಲಿ ಜರುಗಿದ ಸವದತ್ತಿ ತಾಲೂಕಾ ಬನಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು,ಈ ಸಮಾಜದ ಮುಖಂಡರು ಹಾಗೂ ಮಾಜಿ ಶಾಸಕರಾದ ಸುಭಾಸ ಕೌಜಲಗಿ ಮತ್ತು ಬಸವರಾಜ ಮಮದಾಪುರ ಹಾಗೂ ಸಮುದಾಯದ ಬಂಧು ಬಾಂಧವರು ನನಗೆ ರಾಜಕೀಯ ಆಶೀರ್ವಾದ ಮಾಡಿರುವುದರಿಂದ £ಮ್ಮ ಸಮುದಾಯದ ಋಣ ಜೀವನದ ಕೊನೆಯವರೆಗೂ ಮರೆಯುವುದಿಲ್ಲ. ನನಗೆ ಸಹಾಯ ಮಾಡಿದ ಸಮಾಜಗಳಿಗೆ ಪ್ರಜ್ಞಾಕರ್ಥದಿಂದ ಕೆಲಸ ಮಾಡುತ್ತೇನೆ.ಚುನಾವಣೆ ಮುಗಿದ ಅಧ್ಯಾಯ ಸರ್ವ ಮತಕ್ಷೇತ್ರದ ಜನತೆ ನನ್ನವರು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರಿಗೆ ತಾಲೂಕಾ ಬಣಜಿಗ ಸಮಾಜ ಬಾಂಧವರಿಂದ ಸನ್ಮಾ£ಸಲಾಯಿತು.
ನಂತರ ಜರುಗಿದ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಬಸವರಾಜ ಹಂಪನ್ನವರ ಅವರು ಸಮಾಜದ ಧ್ವಜವನ್ನು ನೂತನವಾಗಿ ಅಧಿಕಾರ ವಹಿಸಿಕೊಂಡ ಪ್ರವೀಣ ಪಟ್ಟಣಶೆಟ್ಟಿ ಅವರಿಗೆ ಹಸ್ತಾಂತರಿಸಿದರು.ನೂತನ ಯುವ ಘಟಕದ ಅಧ್ಯಕ್ಷರಾಗಿ ಮಾಂತೇಶ ಅಮ್ಮೀನಭಾವಿ ಅಧಿಕಾರ ವಹಿಸಿಕೊಂಡರು.
ಈ ವೆಳೆ ಪ್ರವೀಣ ಪಟ್ಟಣಶೆಟ್ಟಿ, ಮಹಾಂತೇಶ ಅಮ್ಮಿನಭಾವಿ, ಉಮೇಶ ಬಾಳಿ, ಮಲ್ಲಣ್ಣ ಹಂಪಣ್ಣವರ, ಬಿ.ಆಯ್.ಮಮದಾಪುರ, ಬಸರಾಜ ಅತ್ತಿಗೆರಿ, ಬಸವರಾಜ ಹಂಪಣ್ಣವರ,ವಿ.ಎಸ್. ತೋರಗಲ, ಸಂಜಯ ಅತ್ತಿಗೆರಿ ಸೇರಿದಂತೆ ಇನ್ನೂ ಅನೇಕ ಪ್ರಮುಖರು ಇದ್ದರು.


Leave a Reply