This is the title of the web page
This is the title of the web page

Please assign a menu to the primary menu location under menu

Local News

ಸಂಜಯ ಪಾಟೀಲ ತಮ್ಮ ಚಡ್ಡಿನಾ ಮೊದಲು ಗಟ್ಟಿಯಾಗಿ ಇಟ್ಟುಕೊಳಲಿ : ಎಂ ಎಲ್ ಸಿ ನಾಗರಾಜ್ ಯಾದವ ವ್ಯಂಗ್ಯ


ಬೆಳಗಾವಿ : ನಗರದ ಖಾಸಗಿ ಕಾಲೇಜ್ ಒಂದರಲ್ಲಿ ನಡೆದ, ಕಾಂಗ್ರೆಸ್ಸಿನ ಪರಿಷತ್ ಚುನಾವಣೆಯ ಪ್ರಚಾರದ ಸಭೆಗೂ ಮುನ್ನ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ರೀತಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಶಿಕ್ಷಣವನ್ನು ಕೇಸರೀಕರಣ ಮಾಡುವ ಪಠ್ಯ ಪರಿಷ್ಕರಣೆಯ ವಿರುದ್ಧ ಕಾನೂನುಬದ್ಧವಾಗಿ ಹೋರಾಟ ಮಾಡಿದ, ಭವಿಷ್ಯದ ನಾಯಕರಾಗುವ ಯುವಕರನ್ನು ಜೈಲಿಗೆ ಕಳುಹಿಸಿ, ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಬಿಜೆಪಿಯವರು ನೀಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಲು ಕಾನೂನಿನಲ್ಲಿಯೇ ಅವಕಾಶವಿದೆ, ವಿದ್ಯಾರ್ಥಿಗಳು ಅದನ್ನ ಉಪಯೋಗಿಸಿಕೊಂಡು ಹೋರಾಟ ಮಾಡುತ್ತಿದ್ದರೆ, ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿದರೆ ಹೇಗೆ?? ಎಂದರು.

ಚಡ್ಡಿ ಸುಡುವ ಅಭಿಯಾನವನ್ನು ಸಮರ್ಥಿಸಿಕೊಂಡ ಅವರು, ಬಿಜೆಪಿಯವರು ನಾಳಿನ ದೇಶದ ಭವಿಷ್ಯವಾಗುವ ಯುವಕರಿಂದ, ಮನೆಮನೆಗೆ ತೆರಳಿ ಹಳೆಯ ಚಡ್ಡಿ ಸಂಗ್ರಹಿಸಿ ಅಂತಾ ಹೇಳಿ, ಯುವಕರಿಗೆ ಎಸ್ಟೊಂದು ಅವಮಾನ ಮಾಡ್ತಿದಾರೆ, ಅದಕ್ಕೆ ಈ ಅಭಿಯಾನ ಎಂದರು.

ಸಂಜಯ ಪಾಟೀಲ ಅವರು ಚಡ್ಡಿ ಕೊಡ್ತೀನಿ ಅಂತಾ ಹೇಳಿದಾರೆ ಅಂತಾ ಕೇಳಿದ ಪ್ರಶ್ನೆಗೆ, ಮೊದಲು ಅವರಿಗೆ ಚಡ್ಡಿನಾ ಸರಿಯಾಗಿ ಹಿಡ್ಕೊಲಿಕ್ಕೆ ಹೇಳಿ,, ಅವರ ಚಡ್ಡಿನ ಮೊದಲು ಅವರು ಸರಿಯಾಗಿ ಇಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದರು.


Gadi Kannadiga

Leave a Reply