This is the title of the web page
This is the title of the web page

Please assign a menu to the primary menu location under menu

Local News

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆಯು ಅಖಿಲ ಭಾರತ ಲಿಂಗಾಯತ ಮಹಾಸಭೆಯಾಗಿ ಪರಿವರ್ತನೆಯಾಗಲಿ: ಬಸವರಾಜ ರೊಟ್ಟಿ


ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಬೆಯು ಪ್ರಾರಂಭವಾಗಿ 118 ವರ್ಷಗಳ ಕಳೆದಿವೆ ಇತ್ತಿಚೆಗೆ ಇದರ ಹೆಸರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆ ಎಂದು ಬದಲಾಯಿಸಲಾಗಿದೆ ಇದು ದ್ವಂದ್ವ ನಿಲುವಿಗೆ ಕಾರಣವಾಗಿದ್ದು ಕೂಡಲೆ ಈ ಹೆಸರನ್ನು ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದು ಪರಿವರ್ತನೆ ಮಾಡಬೇಕು ಎಂದು ಜಾಗತಿಕ ಲಿಂಗಾಯತ್ ಮಹಾಸಭಾ ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅವರು ಹೇಳಿದರು.

ಗುರುವಾರ ನಗರದಲ್ಲಿ ಹಮ್ಮಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಬೆಯು ಪ್ರಾರಂಭವಾಗಿ 118 ವರ್ಷಗಳಾಗಿದ್ದು ಈಗ ದಿಡಿರನೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆ ಎಂದು ಮಹಾಸಭೆಯ ಹೆಸರನ್ನು ಬದಲಾಯಿಸಲಾಗಿದೆ ಪ್ರಸ್ತುತ ಸಂದರ್ಭದಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

1940ರಲ್ಲಿ ತಮಿಳುನಾಡಿನ ಕುಂಭಕೋಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಬೆಯ ಸಂದರ್ಭದಲ್ಲಿ ಮಹಾಸಭೆಯ ಹೆಸರನ್ನು ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದು ಪರಿವರ್ತನೆ ಮಾಡಲು ಸರ್ವಾನುಲತದಲ್ಲಿ ಅಂಗಿಕಾರ ಮಾಡಲಾಗಿತ್ತು ಈ ಘಟನೆ ನಡೆದು 80 ವರ್ಷಗಳು ಕಳೆದರು ಹೆಸರು ಬದಲಾವಣೆ ಮಾಡಲಾಗಿರಲಿಲ್ಲ ಆದರೆ ಕೇವಲ ೆರಡು ವರ್ಷಗಳ ಹಿಂದೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆ ಎಂದು ನಾಮ ಪರಿವರ್ತನೆ ಮಾಡಲು ಆಲೋಚಿಸಲಾಗಿದ್ದು ಕೇವಲ ೆರಡೇ ವರ್ಸದಲ್ಲಿ ಹೆಸರನ್ನು ಬದಲಾಯಿಸಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಹಲವಾರು ಗೊಂದಲಗಳು ಉಂಟಾಗುತ್ತಿದ್ದು ಹೆಸರು ಬದಲಿಸಲು ಕಾರಣವೇನು ಎಂಬುವದನ್ನು ಮಹಾಸಭೆಯುಉತ್ತರಿಸಬೇಕು ಎಂದರು.

ಲಿಂಗಾಯತ ಮತ್ತು ವೀರಶೈವಗಳು ಎರಡು ಪ್ರತ್ಯೇಕ ಪದಗಳಾಗಿದ್ದು ವೀರಶಯವ ಎನ್ನುವುದು ಒಂದು ಒಳಪಂಗಡವಾಗಿದೆ ಆದರೆ 1982 ರಿಂದ ಶಾಲಾ ದಾಖಲೆಗಳಲ್ಲಿ ಲಿಂಗಾಯತ ಪದದೊಂದಿಗೆ ವೀರಶೈವ ಲಿಂಗಾಯತ ಪದವನ್ನು ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಹಲವಾರು ಅನಾನುಕೂಲಗಳಾಗುತ್ತಿವೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆ ಎಂದು ಮಹಾಸಭೆಯ ಹೆಸರನ್ನು ಬದಲಾಯಿಸಿರುವುದರಿಂದ ದ್ವಂದ್ವ ನಿಲುವು ಉಂಟಾಗಿದ್ದು ಅಖಿಲ ಭಾರತ ವೀರಶೈವ ಮಹಾಸಬೆಯು ತನ್ನ ಹೆಸರನ್ನು ಅಖೀಲ ಭಾರತ ಲಿಂಗಾಯತ ಮಹಾಸಭೆಯಾಗಿ ಪರಿವರ್ತನೆ ಮಾಡಬೇಕು ಮತ್ತು ವೀರಶೈವ ಬದಲಿಗೆ ಲಿಂಗಾಯತ ಪದ ಬಳಕೆ ಮಾಡಬೇಕು ಇದರಿಂದ ಸ್ವತಂತ್ರ ಧರ್ಮದ ನಿರ್ಧಾರಕ್ಕೆ ಒಂದು ಬಲ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಆ.ವೈ ಬೇಂಡಿಗೇರಿ, ಎಸ್.ಜಿ ಸಿದ್ನಾಳ್, ಸಿಎಂ ಬುದ್ಯಾಳ ಸೇರಿದಂತೆ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.


Leave a Reply