ಯಮಕನಮರಡಿ: ಗ್ರಾಮದ ಮೂಲಭುತ ಸಮಸ್ಯೆಗಳಾದ ಕುಡಿಯುವ £Ãರು, ಒಳಚರಂಡಿ, ರಸ್ತೆ, ಮುಂತಾದವುಗಳ ಸಮಿಕ್ಷೆ ಮಾಡಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿ ಮಾಡುವ £ಟ್ಟಿನಲ್ಲಿ ಗ್ರಾಮದ ಯೋಜನಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಹೊಸಪೇಟ ಗ್ರಾ.ಪಂ. ಪಿಡಿಓ ಎಮ್.ಬಿ.ಪೂಜೇರಿ ಹೇಳೀದರು.
ಅವರು ಶುಕ್ರವಾರ ದಿ ೦೯ ರಂದು ಹೊಸಪೇಟ ಗ್ರಾ.ಪಂ. ವ್ಯಾಪ್ತಿಗೆ ಬರುವ ಲೇಬರ ಕ್ಯಾಂಪದಲ್ಲಿ ವಾರ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೂತನ ಅಧ್ಯಕ್ಷರು ಸದ್ಯರು ತಮ್ಮ ತಮ್ಮ ಗ್ರಾಮಗಳ ಸಮಸ್ಯೆಗಳನ್ನು ತಿಳಿದುಕೊಂಡು ಸರಿಯಾದ ಮಾಹಿತಿ ಪೂರೈಸಿದ್ದಲ್ಲಿ ಕ್ರೀಯಾಯೋಜನೆಯನ್ನು ರೂಪಿಸಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲು ಅನುಕೂಲವಾಗುತ್ತದೆ. ಗ್ರಾಮದ ಅಭಿವೃದ್ದಿ ಕಾರ್ಯಗಳು ಯಶಸ್ವಿಯಾಗಲು ಎಲ್ಲರೂ ಕೈಜೊಡಿಸಬೆಕು ಎಂದು ಪಿಡಿಓ ಎಮ್.ಬಿ. ಪೂಜೇರಿ ಹೇಳೀದರು.
ಲೇಬರ ಕ್ಯಾಂಪ ಗ್ರಾಮದ ಯೋಜನಾ ಸಮಿತಿ ನೂತನ ಅಧ್ಯಕ್ಷರಾದ ಭಾರತಿ ಬೆಣ್ಣಿಯವರು ವಾರ್ಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವಾರ್ಡ ಸಭೆಯಲ್ಲಿ ಗ್ರಾಮದ ಯೋಜನಾ ಸಮಿತಿ ಸದಸ್ಯರಾದ ಅವಿನಾಶ ಕುರಣಿ, ಬಸವರಾಜ ಚೌಗಲಾ, £ಂಗನಗೌಡ ಪಾಟೀಲ, ಕಾಡೇಶ ಗೋಳಪ್ಪಗೋಳ, ವಿಜಯಲಕ್ಷ್ಮೀ ನಾಯಿಕ, ಅಮೃತಾ ಬೇವಿನಕಟ್ಟಿ ಮತ್ತು ಗ್ರಾಮಸ್ಥರಾದ ರವಿ ಬೆಣ್ಣಿ, ಶ್ರೀಧರ ಬೆಣ್ಣಿ, ಸಂದೀಪ ಕಲ್ಕುಟಗಿ, ಕಲ್ಮೇಶ ಅಂಬಿ, ಶಿವಾನಂದ ಘೋಳಪ್ಪಗೋಳ, ಅಂಗನವಾಡಿ ಕಾರ್ಯಕರ್ತೆಯರಾದ ಅನ್ನಪೂರ್ಣಾ ನಾಯಿಕ, ವ್ಹಿ.ಆರ್.ಪಿ ರಿಜ್ವಾನಾ ಕುತುಬುದ್ದಿನ ಅಥಣಿ ಗ್ರಾ.ಪಂ. ಸಿಬ್ಬಂದಿಯಾದ ಸಾಗರ ಮಗದುಮ್ಮ ಉಪಸ್ಥಿತರಿದ್ದರು. ಗ್ರಾಮದ ಶಾಲೆಗಳು ಅಂಗನವಾಡಿಗಳು ದೇವಸ್ಥಾನಗಳ ಕುರಿತು ರಂಗೋಲಿಯನ್ನು ಬಿಡಿಸಲಾಗಿತ್ತು.
Gadi Kannadiga > Local News > ಗ್ರಾಮದ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿ; ಎಮ್.ಬಿ. ಪೂಜೇರಿ