This is the title of the web page
This is the title of the web page

Please assign a menu to the primary menu location under menu

State

ಜಿಲ್ಲಾಡಳಿತ ಭವನದಲ್ಲಿ ಎಂ.ಸಿ.ಎ. ಸಂಪರ್ಕ ಕಚೇರಿ ಆರಂಭ


ಗದಗ ಮಾ ೨೦ : ಜಾಹೀರಾತು ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ ಆಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯ(ಕೆ.ಎಸ್.ಎಂ.ಸಿ.ಎ) ನೂತನ ಸಂಪರ್ಕ ಕಚೇರಿಯು ಜಿಲ್ಲಾಡಳಿತ ಭವನದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ ೧೨೨/ಬಿ ರಲ್ಲಿ ಆರಂಭಿಸಲಾಯಿತು.
ಕೆ.ಎಸ್.ಎಮ್.ಸಿ.ಎ ನಿಗಮದ ಅಧ್ಯಕ್ಷರಾದ ಎಂ.ಎಸ್ ಕರಿಗೌಡ್ರ ಅವರು ನೂತನ ಸಂಪರ್ಕ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ ಆಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್‌ನ ನಿರ್ದೇಶಕರಾದ ವಿರೇಶ ಸಂಗಳದ, ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ.ಬಿ.ಪೂಜಾರಿ, ಉಪ ಪ್ರಧಾನ ವ್ಯವಸ್ಥಾಪಕರಾದ ಪಿ.ಎಸ್.ನಂದಿಶ, ಶಾಖೆಯ ವ್ಯವಸ್ಥಾಪಕರಾದ ಸಿದ್ದಲಿಂಗೇಶ ಹಸಬಿ, ಶಶಿಕಲಾ ಹಿರೇಗೌಡರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Leave a Reply