ಕುಷ್ಟಗಿ :- ಕಾವೇರಿ ಸುದ್ದಿವಾಹಿನಿಯ ಕುಷ್ಟಗಿ ತಾಲೂಕ ವರದಿಗಾರ ರಮೇಶ ಹಿರೇಮನಿ ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ಕುಷ್ಟಗಿ ಯಲ್ಲಿ ಕೆಲ ವರ್ಷಗಳಿಂದ ಪತ್ರಿಕೋದ್ಯಮ ದಲ್ಲಿ ಸೇವೆ ಸಲ್ಲಿಸುತ್ತಾ ಸಮಾಜ ಸೇವೆ ಮಾಡುತ್ತಿದ್ದರು.
ಕರ್ನಾಟಕ ಪತ್ರಕರ್ತರ ಸಂಘದ ಮೃತ ರಮೇಶ ಹಿರೇಮನಿ ಅವರ ಅಕಾಲಿಕ ಸಾವಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಹಾಗೂ ಕರ್ನಾಟಕ ಪತ್ರಕರ್ತರ ಸಂಘದಿಂದ ಲೋಕದರ್ಶನ ಕನ್ನಡ ದಿನ ಪತ್ರಿಕೆಯ ವರದಿಗಾರ ಬಸವರಾಜ ಪಲ್ಲೇದ್ ಇವರ ಅಂಗಡಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಮಾಡಲಾಯಿತು.ನಂತರ ಎರಡು ಸಂಘಗಳ ವತಿಯಿಂದ ಆರ್ಥಿಕ ಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅನೀಲ್ ಆಲ್ ಮೇಲ್, ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ರಾವಣಕಿ, ಪತ್ರಕರ್ತರಾದ ರವೀಂದ್ರ ಬಾಕಳೆ, ಸಂಗಮೇಶ ಸಿಂಗಾಡಿ, ರಮೇಶ ಚಲವಾದಿ, ಶರಣಪ್ಪ ಲೈನದ್, ಗಿರೀಶ ದಿವಾಣಜಿ, ಪವಾಡೆಪ್ಪ ಚೌಡ್ಕಿ, ಬಸವರಾಜ ಗಾಣಿಗಾರ, ಶೇಖರ ಗೋರೆಬಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ