ಕುಷ್ಟಗಿ :- ಕಾವೇರಿ ಸುದ್ದಿವಾಹಿನಿಯ ಕುಷ್ಟಗಿ ತಾಲೂಕ ವರದಿಗಾರ ರಮೇಶ ಹಿರೇಮನಿ ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ಕುಷ್ಟಗಿ ಯಲ್ಲಿ ಕೆಲ ವರ್ಷಗಳಿಂದ ಪತ್ರಿಕೋದ್ಯಮ ದಲ್ಲಿ ಸೇವೆ ಸಲ್ಲಿಸುತ್ತಾ ಸಮಾಜ ಸೇವೆ ಮಾಡುತ್ತಿದ್ದರು.ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾಗಿ ಹಲವು ವರ್ಷಗಳಿಂದ ಸಂಘಟನೆಯ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದರು.ಮೃತ ರಮೇಶ ಹಿರೇಮನಿ ಅವರ ಅಕಾಲಿಕ ಸಾವಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಘಟಕ ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲಾ ಘಟಕ ಹಾಗೂ ಕುಷ್ಟಗಿ ತಾಲೂಕ ಘಟಕ ಸೇರಿದಂತೆ ಕುಷ್ಟಗಿ ತಾಲೂಕಿನ ಎಲ್ಲಾ ಮಾದ್ಯಮ ಮಿತ್ರರು ಶ್ರೀಯುತರಿಗೆ ಸಂತಾಪ ಸೂಚಿಸಲಾಯಿತು.