This is the title of the web page
This is the title of the web page

Please assign a menu to the primary menu location under menu

Local News

ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಯನ್ನು ಕ್ರೀಡೆಗಳಿಂದ ಸಾಧಿಸಲು ಸಾಧ್ಯ : ಮಂಗಲಾ ಅಂಗಡಿ


ಬೆಳಗಾವಿ:- ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯ,ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೨-೨೩ ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ತಾಲೂಕಾ ಮಟ್ಟದ ಕ್ರೀಡಾಕೂಟವು ಶನಿವಾರ ದಿನಾಂಕ ೨೦/೦೮/೨೦೨೨ ರಂದು ಜಿಲ್ಲಾ ಕ್ರೀಡಾಂಗಣ, ನೆಹರು ನಗರ, ಬೆಳಗಾವಿಯಲ್ಲಿ ಜರುಗಿತು.
ಕ್ರೀಡಾಕೂಟವನ್ನು ಶ್ರೀಮತಿ. ಮಂಗಲಾ ಅಂಗಡಿ, ಮಾನ್ಯ ಸಂಸದರು, ಬೆಳಗಾವಿ ಇವರು ಉದ್ಗಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಈ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಯನ್ನು ಕ್ರೀಡೆಗಳಿಂದ ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕೆಂದು ಕರೆ ನೀಡಿದರು.
ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ. ಶ್ವೇತಾ ಸಿ. .ನಾಯ್ಕರ ಅವರು ಮಾತನಾಡುತ್ತಾ, ಮನುಷ್ಯನಲ್ಲಿರುವ ದೈಹಿಕ ನೂನ್ಯತೆಗಳು ಯಾವುದೆ ಸಾಧನೆಗೆ ಅಡ್ಡಿಯಾಗಲಾರದು. ಗುರಿ ತಲುಪಲು ಪೋಷಕರ ಪಾತ್ರವು ಮಹತ್ವವಾಗಿದ್ದು ವಿದ್ಯಾರ್ಥಿಗಳು ಪೋಷಕರ ಮಾರ್ಗದರ್ಶನದೊಂದಿಗೆ ಸಾಗಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ. ನಾಗರಾಜ ವಿ. ಉಪನೀರ್ದೆಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ , ಬೆಳಗಾವಿ. ಅವರು ಇಂದಿನ ವಿದ್ಯಾರ್ಥಿಗಳು ಮೊಬೈಲನಲ್ಲಿ ಲಭ್ಯವಿರುವ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿವಹಿಸುತ್ತಿರುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೆ ಒಳಗಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ.ಸಿ.ಎನ್.ನಾಯ್ಕರ ಅವರು ಮಾತನಾಡುತ್ತಾ, ನಾಯ್ಕರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಶೈಕ್ಷಣಿಕ ಪರಿಸರದೊಂದಿಗೆ ಇಂತಹ ಕ್ರೀಡಾಕೂಟವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಇವರ ಸಹಯೋಗದಲ್ಲಿ ಏರ್ಪಡಿಸುತ್ತಿz.ೆ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಜಯಶಾಲಿಯಾಗಲು ಕರೆ ನೀಡುತ್ತಾ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯೇ ನಾಯ್ಕರ ಶಿಕ್ಷಣ ಸಂಸ್ಥೆಯ ದ್ಯೇಯ ಎಂದು ನುಡಿದರು.
ವೇದಿಕೆಯ ಮೇಲೆ ಶ್ರೀಮತಿ. ಮಂಗಲಾ ಅಂಗಡಿ, ಮಾನ್ಯ ಸಂಸದರು, ಶ್ರೀ. ನಾಗರಾಜ ವಿ. ಉಪನೀರ್ದೆಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ , ಬೆಳಗಾವಿ., ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ. ಶ್ವೇತಾ ಸಿ. ನಾಯ್ಕರ, ಪ್ರಾಂಶುಪಾಲ ಡಾ.ಸಿ.ಎನ್.ನಾಯ್ಕರ ಹಾಗೂ ದೈಹಿಕ ಶಿಕ್ಷಣ ನೀರ್ದೆಶಕರಾದ ಶ್ರೀ. ಜಿ.ಎನ್.ಪಾಟೀಲ ಉಪಸ್ಥಿತರಿದ್ದಾರೆ.


Gadi Kannadiga

Leave a Reply