This is the title of the web page
This is the title of the web page

Please assign a menu to the primary menu location under menu

Local News

“ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ವೈಕಲ್ಯ ಹೆಚ್ಚು ಅಪಾಯಕಾರಿ


ಬೆಳಗಾವಿ: ಡಿಸೆಂಬರ-೬: “ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ವೈಕಲ್ಯ ಹೆಚ್ಚು ಅಪಾಯಕಾರಿಯಾಗಿದೆ. ಅದರಿಂದ ಸಾಮಾಜಿಕ ಸ್ವಾಸ್ತ್ಯ ಹದಗೆಡುತ್ತದೆ. ಹೀಗಾಗಿ ವಿಕಲ ಚೇತನರ ಜೀವನ ಸಮಾಜಕ್ಕೆ ಮಾದರಿಯಾಗಬೇಕು” ಎಂದು ಸಮಾಜ ಸೇವಕಿ ಮಾಧುರಿ ಪಾಟೀಲ ಅಭಿಪ್ರಾಯ ಪಟ್ಟರು.
ನಗರದ ಶಹಾಪುರದ ಆಳವನ್ ಗಲ್ಲಿಯಲ್ಲಿ ಜರುಗಿದ ದಿ ಅಸೋಸಿಯೇಷನ್ ಆಫ್ ಫಿಸಿಕಲ್ ಹ್ಯಾಂಡಿಕ್ಯಾಪ್ ನ ೫೦ನೇ ವಾರ್ಷಿಕೋತ್ಸವ ಹಾಗೂ ವಿಕಲ ಚೇತನರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು,” ಸಮಾಜದ ವಿವಿಧ ಸ್ಥರದ ಜನರು ವಿಕಲಚೇತನರಿಗೆ ಅನುಕಂಪಕ್ಕಿಂತ ಪ್ರೀತಿ ಮತ್ತು ಸಹಕಾರ ನೀಡಬೇಕು” ಎಂದರು.
ಅತಿಥಿಯಾಗಿ ಪಾಲ್ಗೊಂಡ ಕುಮಾರ ಅರ್ಜುನ ಪ್ರಶಸ್ತಿ ವಿಜೇತ ಸ್ವಪ್ನಿಲ ಪಾಟೀಲ ಮಾತನಾಡಿ,” ಕ್ರೀಡೆ, ಸಂಗೀತ ಕ್ಷೇತ್ರಗಳಲ್ಲಿ ವಿಕಲ ಚೇತನರ ಸಾಧನೆ ಹೆರಳವಾಗಿದ್ದು ಅವರಿಗೆ ಸರ್ಕಾರ, ಸಂಘ-ಸಂಸ್ಥೆಗಳಿಂದ ಸಹಾಯ ಸಹಕಾರ ಸಿಗುವಂತಾಗಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಪೆಟ್ರೋಲಿಯಂ ವ್ಯವಸ್ಥಾಪಕ ದೀಪಕ ಅಗರ್ವಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ಇಬ್ಬರು ಸಾಧಕರಿಗೆ ಎಪಿಎಚ್ ದಿವ್ಯಾಂಜನ್ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ವಿಜೇತರಾದ ರಾಜೇಶ ಗಜಾನನ ಶಿಂದೆ ಅಂತರಾಷ್ಟ್ರೀಯ ಈಜುಗಾರ ಹಾಗೂ ಪ್ರಶಾಂತ ಹುಂದ್ರೆ ಹಾಗೂ ಎಸ್ ಬಿ ಐ ಬ್ರಾಂಚ್ ಮ್ಯಾನೇಜರ ಅವರಿಗೆ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ವತಿಯಿಂದ ತ್ರಿಚಕ್ರ ವಾಹನ ಹಾಗೂ ಇತರ ಸಾಮಗ್ರಿ ವಿತರಿಸಲಾಯಿತು.
ಸಂಸ್ಥೆಯ ಹಲವಾರು ಸಾಧಕರಿಗೆ, ಸಂಸ್ಥೆಗೆ ಸಂಸ್ಥೆಗಾಗಿ ದುಡಿದಂತ ವಿವಿಧ ಉದ್ಯೋಗಿಗಳಿಗೆ ಸನ್ಮಾನಿಸಲಾಯಿತು. ಹಲವಾರು ಸಾಧಕರ ಭಾವಚಿತ್ರ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ರಾಘವೇಂದ್ರ ಅನ್ವೇಕರ, ಸಂಸ್ಥೆಯ ಅಧ್ಯಕ್ಷರಾದ ಅರೀಫ್ ವಾಲಿಕರ, ಕಾರ್ಯದರ್ಶಿ ಗಿರೀಶ ಸವ್ವಾಶೇರಿ, ತಸ್ಲೀಮ ದೋಂಕರ್, ವೀಣಾ ಸ್ವಾಮಿ ಸುಧೀರ, ಶೇಖರ, ವಿಜು, ಪ್ಯಾಸೆಸ್ ದಯಾನಂದ, ಡಿಕರ್ ವಾಮನ ಕಟ್ಟಿ ಹಾಗೂ ಸಚಿನ ಪಾಟೀಲ ಉಪಸ್ಥಿತರಿದ್ದರು ಮುಷ್ತಾಕ ಸೈಯದ ಕಾರ್ಯಕ್ರಮ ನಿರ್ವಹಿಸಿದರು


Leave a Reply