This is the title of the web page
This is the title of the web page

Please assign a menu to the primary menu location under menu

Local News

ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ

????????????????????????????????????

ಬೆಳಗಾವಿ : ಒತ್ತಡ ರಹಿತ ಜೀವನ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂಧು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. “ಆರೊಗ್ಯವೆಂಬುದು ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕ ಆರೋಗ್ಯವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅದರಲ್ಲೂ ಇಂದಿನ ಯಾಂತ್ರೀಕೃತ ಜೀವನದಲ್ಲಿ ಎಲ್ಲವನ್ನೂ ಎಲ್ಲದಕ್ಕೂ ಯಂತ್ರಗಳ ಅವಲಂಬನೆಯನ್ನು ಹೊಂದಿರುವದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ. ಇಂದಿನ ಪೇಸಬುಕ್ ವಾಟ್ಸಅಪ ಮುಂತಾದ ಸಾಮಾಜಿಕ ಮಾಧ್ಯಮಗಳ ಮೊರೆಹೊಕ್ಕು ಪಕ್ಕದಲ್ಲೇ ಕುಳಿತಿರುವ ಸಂಭಂದಿಯ ಹತ್ತಿರ ಮಾತನಾಡಲೂ ಸಹ ಸಮಸಯವಿಲ್ಲದೇ ಇರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಗಳಿಗೆ ಅಂಟಿಕೊಳ್ಳದೇ ಇತರರೊಂದಿಗೆ ಬೆರೆತು, ಆಟ, ಪಾಠ, ಗಳಿಕೆ, ಸಾಮಾಜಿಕ ಜೀವನಗಳನ್ನು ಸಮತೋಲಿತವಾಗಿ ಮುನ್ನಡೆಸಿಕೊಂಡು ಹೋದಲ್ಲಿ ಮಾತ್ರ ನೆಮ್ಮದಿಯ ಜೀವನ ಸಾಧ್ಯ ವೆಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಇನ್ನರ ವ್ಹೀಲ್ ಕ್ಲಬ್ ನ ಪಾಸ್ಟ ಪ್ರೆಸಿಡೆಂಟ ಶ್ರೀಮತಿ. ಡಾ. ಸೋನಲ ಧಾಮನಕರ ಅವರು ಮಾತನಾಡುತ್ತ ಒಬ್ಬ ಮನುಷ್ಯ ದೈಹಿಕವಾಗಿ ಆರೋಗ್ಯವಂತನಾಗಿದ್ದು ಮಾನಸಿಕವಾಗಿ ಅನಾರೊಗ್ಯ ಪೀಡಿತನಾಗಿದ್ದರೆ ಅದು ಅವನ ದೈಹಿಕ ಸ್ಥಿತಿಗತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತz.ೆ ಇದರಿಂದ ಆತನ ಇನ್ನಿತರೆ ಆರೋಗ್ಯದ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಆರೋಗ್ಯವು ತನ್ನದೇ ಆದ ಪ್ರಾಶಸ್ತö್ಯವನ್ನು ಹೊಂದಿದೆ ಎಂದು ಮಾತನಾಡುತ್ತಿದ್ದರು.
ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವಿಟ್ಜರಲೆಂಡನ ಮಾನಸಿಕ ರೋಗ ತಜ್ಞೆ ಡಾ. ಮೊನಿಕಾ ಮುಲ್ಲರ್ ಮಾತನಾಡುತ್ತ “ದೇಶಗಳು ಯಾವುದೇ ಆದರೂ ಮಾನಸಿಕ ರೋಗಗಳು ತನ್ನದೇ ಆದ ಸಾಮ್ಯತೆಯನ್ನು ಹೊಂದಿವೆ. ಅದರಲ್ಲೂ ಗ್ರಹಿಣಿಯರಲ್ಲಿ ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಾನಸಿಕ ಕ್ಲೇಷಗಳಿಗೆ ಒಳಗಾಗುವದು ಸಹಜವಾಗಿದೆ. ಮಾನಸಿಕ ರೋಗಗಳ ಲಕ್ಷಣಗಳು ಒಂದೇ ಸಾರಿ ತಲೆ ದೋರದಿದ್ದರೂ ನಿಧಾನವಾಗಿ ಅವುಗಳು ನಮ್ಮ ಜೀವನದ ಮೇಲೆ ಕ್ರಮೇನವಾಗಿ ಪರಿಣಾಮವನ್ನು ಬೀರುತ್ತಿರುತ್ತವೆ. ಆದ್ದರಿಂದ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಮನೋ ವೈದ್ಯರನ್ನು ಕಂಡು ತಕ್ಕ ಚಿಕಿತ್ಸೆಗೊಳಗಾಗುವದು ಅತ್ಯಗತ್ಯವಾಗಿದೆ ಎಂದು ತಿಳುವಳಿಕೆ ನೀಡಿದರು.
ನಮ್ಮ ದಿನನಿತ್ಯ ಕಾರ್ಯದಲ್ಲಾಗುವ ಸಣ್ಣಪುಟ್ಟ ಏರುಪೇರುಗಳಿಂದ ಮಾನಸಿಕ ಆರೋಗ್ಯ ಹದಗೆಡುವುದರಿಂದ ನಮ್ಮ ಕಾರ್ಯಕ್ಷಮತೆ, ದಕ್ಷತೆ ಹಾಗೂ ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಪ್ರತಿಯಾಗಿ ಪ್ರತಿನಿತ್ಯದ ಜೀವನ ಶೈಲಿಯಲ್ಲಿ ದೈಹಿಕ ಚಟುವಟಿಕೆಗಳು, ಮಾನಸಿಕವಾಗಿ ಸಂತೋಷದಿಂದಿರುವುದು, ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದು ಹಾಗೂ ಆಧ್ಯಾತ್ಮಿಕ ವಿಚಾರ ಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸದೃಡರಾಗಲು ಸಾಧ್ಯವೆಂದು ಅತಿಥಿಗಳಾಗಿ ಆಗಮಸಿದ್ದ ಕೆ ಎಲ್ ಇ ಇನ್ಸಿ÷್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ ಪ್ರಾಮಶುಪಾಲರಾದ ಶ್ರೀ ವಿಕ್ರಾಂತ ನೇಸರಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ “ ಭಾರತದ ಕಳೆದ ೨೦೨೧ ರ ಸಮೀಕ್ಷೆಯ ಪ್ರಕಾರ ಸುಮಾರು ೧ ಲಕ್ಷ ೬೪ ಸಾವಿರದಷ್ಟು ಜನರು ಆತ್ಮಹತ್ಯೆಗಳಿಗೆ ಒಳಗಾಗಿದ್ದಾರೆ. ಅದರಲ್ಲಿ ೧೩ ಸಾವಿರದಷ್ಟು ಜನರು ಹದಿಹರೆಯದವರಾಗಿದ್ದಾರೆ ಎಂದು ತಿಳಿದಾಗ ಮನಸ್ಸಿಗೆ ತುಂಬ ಕಷ್ಟವೆನಿಸುತ್ತದೆ. ಆತ್ಮಹತ್ಯೆಯಂತಹ ಯೋಚನೆಗಳು ಮನಸ್ಸಿನಲ್ಲಿ ಬಂದಾಗ ತಕ್ಷಣವೇ ಮನೋವೈದ್ಯರನ್ನು ಕಂಡುಕೊಂqರೆ ಇಂತಹ ಸಮಸ್ಯೆಗಳಿಂದ ಸಾವು ಬಾರದಂತೆ ತಡೆಯಬಹುದಾಗಿದೆ. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿಕೆ, ಪ್ರೇಮ ವೈ¥sಲ್ಯ, ಕಡಿಮೆ ಅಂಕಗಳಿಕೆ ಹೀಗೆ  ಮುಂತಾದ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಪ್ರತಿಯೊಬ್ಬರೂ ಇಂದಿನ ಸೋಲನ್ನು ನಾಳಿನ ಗೆಲುವಿನಮೆಟ್ಟಿಲು ಎಂಬ ಹುಮ್ಮಸ್ಸಿನಿಂದ ಉತ್ಸಾಹಿತರಾಗಿ ಮುನ್ನಡೆದಲ್ಲಿ ಸಫಲತೆಯು ಮುಡಿಗೇರುವದು ಶತಸಿದ್ದವಾಗಿದೆ. ಆದ್ದರಿಂದ ಪರೀಸ್ಥಿತಿಗಳನ್ನು ನಿಭಾಯಿಸಿ ಅದನ್ನು ಎದುರಿಸಿ ಅಥವಾ ಆ ಸಂದರ್ಭದಲ್ಲಿ ಉದಾಸೀನತೆ ತೊರಿ ನಂತರ ಗಂಭೀರವಾಗಿ ಗಮನ ಹರಿಸಿ ಜಯಗಳಿಸಬೇಕು ಎಂದು ಹುಮ್ಮಸ್ಸಿನಿಂದ ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನರ ವ್ಹೀಲ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಶಾಲಿನಿ ಚೌಗುಲೆ ಅವರು ಸಾಂದರ್ಭಿಕವಾಗಿ ಮಾತನಾಡಿದರು. ಯು ಎಸ್ ಎಮ್ ಕೆ ಎಲ್ ಇ ಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥೆ ಡಾ. ಸುಚೇತಾ ವಾಘಮಾರೆ ಅವರು ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ. ಅಂಟೋನಿಯೋ ಕರವ್ಹಾಲೊ ವ್ಯಸನ ಮುಕ್ತತೆ ಎಂಬ ವಿಷಯದ ಮೇಲೆ ಮಾತನಾಡಿದರು. ಹೆಸರಾಂತ ಮನೋರೋಗ ತಜ್ಞೆ ಡಾ. ಅಶ್ವಿನಿ ಪದ್ಮಶಾಲಿ ಆವರು ಕೆಲಸದ ಸ್ಥಳಗಳಲ್ಲಿ ಮಾನಸಿಕ ಒತ್ತಡಗಳ ನಿರ್ವಹಣೆ ಹಾಗೂ ಹದಿಹರೆಯದವರ ಸಮಸ್ಯೆಗಳ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಬರುವ ಬಾಲಕರ ಬಾಲ ಮಂದಿರದ ಸುಮಾರು ೨೦ ಮಕ್ಕಳಿಗೆ, ಜ್ಞಾನದೀಪ ಶಾಲೆಯ ಸಿಬ್ಬಂದಿಗಳಿಗೆ ಹಾಗೂ ಸಾನ್ಸಿ ಸ್ತ್ರೀ ಶಕ್ತಿ ಸಂಘದ ಪಧಾಧಿಕಾರಿಗಳಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗ ಹಾಗೂ ಇನ್ನರವ್ಹೀಲ್ ಕ್ಲಬ್ ಆಫ ಬೆಳಗಾವಿಯ ವತಿಯಿಂದ ಕಿರು ಕಾಣಿಕೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಾನ್ಸಿ ಸ್ತ್ರೀ ಶಕ್ತಿ ಸಂಘದ ಸುಮಾರು ೨೦ ಪದಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಬರುವ ಬಾಲಕರ ಬಾಲ ಮಂದಿರದ ಹಾಗೂ ಪರುಷರ ಅನುಪಾಲನ ಗೃಹದ ಸಿಬ್ಬಂದಿ ವರ್ಗದವರು ಹಾಗೂ ಸುಮಾರು ೨೦ ಮಕ್ಕಳು, ಯು.ಎಸ್.ಎಮ್. ಕೆಎಲ್ ಇ ಯ ವೈದ್ಯವಿದ್ಯಾರ್ಥಿಗಳು, ಕೆ ಎಲ್ ಇ ಇನ್ಸಿ÷್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ ವಿದ್ಯಾರ್ಥಿಗಳು, ಜ್ಞಾನದೀಪ ಶಾಲೆಯ ಸಿಬ್ಬಂದಿ ಹಾಗೂ ನಮ್ಮ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ದೀಪಾ ಪಾಟೀಲ ಅವರು ನಿರೂಪಿಸಿದರು. ಮಲ್ಲಿಕಾರ್ಜುನ ಮಾಯಣ್ಣವರ ಸ್ವಾಗತಿಸಿದರು. ಕುಮಾರಿ ಚಂದ್ರಕಲಾ ವಂದಿಸಿದರು.

Gadi Kannadiga

Leave a Reply