This is the title of the web page
This is the title of the web page

Please assign a menu to the primary menu location under menu

Local News

ಎಂಇಎಸ್ ವಿರುದ್ಧ ಕರವೆ ಆಕ್ರೋಶ


ಬೆಳಗಾವಿ: ಎಂಇಎಸ್ ಮುಖಂಡ ಶುಭಂ ಶಳಕೆಯನ್ನ ಗಡಿಪಾರು ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳನ್ನ ಅವಾಚ್ಚ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುವ ಶುಭಂ ಶಳಕೆಯನ್ನ ಗಡಿಪಾರು ಮಾಡಲಿ, ಜನಪ್ರತಿ‌ನಿಧಿಗಳ ಮಾತು ಕೇಳಿಕೊಂಡು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೌನ ವಹಿಸಿದಿಯೋ ಅಥವಾ ಎಂಇಎಸ್ ವೋಟ್ ಬ್ಯಾಂಕ್ ಗೋಸ್ಕರ್ ಸುಮ್ಮನಿದ್ದೀಯೋ ಗೊತ್ತಾಗ್ತಿಲ್ಲ
ಇಷ್ಟು ದಿನ ಎಂಇಎಸ್ ಸಾಮಾಜಿಕ ಜಾಲತಾಣದಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು ಇದೀಗ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಪುಂಡಾಟಿಕೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಅಧಿಕಾರಿಗಳನ್ನ ಅವಾಚ್ಚ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುವ ಕೆಲಸವನ್ನು ಶುಭಂ ಶಳಕೆ ಮಾಡ್ತಿದ್ದಾನೆ, ಇದನ್ನ ರಕ್ಷಣಾವೇದಿಕೆ ಸಹಿಸಲ್ಲ ಎಂಇಎಸ್ ಶುಭಂ ಶಳಕೆ ಮತ್ತು ಸಂಗಡಿಗರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಶುಭಂ ಶಳಕೆಯನ್ನ ಗಡಿಪಾರು ಮಾಡಿದ್ರೆ ಬೆಳಗಾವಿ ಶಾಂತವಾಗಿರ್ತದ ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆಯೇ ಶುಭಂ ಶಳಕೆಗೆ ತಕ್ಕ ಪಾಠ ಕಲಿಸಲಿದೆ ಅದರಿಂದಾಗುವ ಅನಾಹುತಕ್ಕೆ ನೇರವಾಗಿ ಜಿಲ್ಲಾಡಳಿತ,ಸರ್ಕಾರ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಇಲ್ಲಿನ ಜನಪ್ರತಿ‌ನಿಧಿಗಳು ಮಂತ್ರಿಗಳು ವೋಟ ಬ್ಯಾಂಕ್ ಗಾಗಿ ಕೇಸ್ ಹಿಂಪಡೆದಿದ್ದಾರೆ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಮಾಡಿಸುವ ಕಲಸ ಮಾಡ್ತಿದ್ದಾರೆ ಇದರಿಂದ‌ ಮತ್ತಷ್ಟು ಪುಷ್ಟಿ ತೆಗೆದುಕೊಂಡು ಎಂಇಎಸ್ ಭಾಷಾ ಸಾಮರಸ್ಯ ಕದಡುವ ಕೆಲಸ ಮಾಡ್ತಿದೆ ಇಂತವರನ್ನ ಗಡಿಪಾರು ಮಾಡಬೇಕು ಎಂದ ಬೆಳಗಾವಿ ರಕ್ಷಾಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


Leave a Reply