ಕೊಪ್ಪಳ, ಅ. ೧೧ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಇದೇ ಅಕ್ಟೋಬರ್ ೧೫ ರಂದು ಬೆಳಿಗ್ಗೆ ೧೦-೩೦ ಗಂಟೆಯಿಂದ ೦೩-೩೦ ಗಂಟೆಯವರೆಗೆ ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಮಿನಿ ಉದ್ಯೋಗ ಮೇಳದಲ್ಲಿ ಕ್ರೆಡಿಟ್ ಗ್ರಾಮೀಣ ಕೂಟ ಪ್ರೈ.ಲಿ ಗಂಗಾವತಿ, ರಿಲ್ಯಾನ್ಸ್ ಲೈಫ್ ಇನ್ಸೂರೆನ್ಸ್ ಹೊಸಪೇಟೆ, ಶ್ರೀ ಸಾಯಿ ಸೇವಾ ಸಂಸ್ಥೆ ಧಾರವಾಡ, ಯುರೇಖಾ ಪ????೯ ಪ್ರೈ.ಲಿ ಮತ್ತು ಕ್ಲಿಕ್ ನೌಕರಿ ಡಾಟ್ ಕಾಮ್ ಹುಬ್ಬಳ್ಳಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪೂರ್ಣಗೊಳಿಸಿದ ೧೮ ರಿಂದ ೩೫ ವರ್ಷದೊಳಗಿನ ಯುವಕ ಮತ್ತು ಯುವತಿಯರು ಈ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ತಮ್ಮ ಸ್ವ-ವಿವರದ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರಿಗೆ ಅಥವಾ ಮೊ.ಸಂ. ೯೩೫೩೫೧೫೫೧೮ ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಾಣೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಅ. ೧೫ ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ