This is the title of the web page
This is the title of the web page

Please assign a menu to the primary menu location under menu

State

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿದ ಸಚಿವ ಸಿ ಸಿ ಪಾಟೀಲ


ಗದಗ ಫೆ ೧೧: ಲಕ್ಕುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಶನಿವಾರ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು, ಸಹಕಾರಿ ರಂಗ ಹುಟ್ಟಿದ ಪ್ರದೇಶದಲ್ಲಿ ಸಹಕಾರಿ ಸಂಘ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಬೇಕು. ಅನೇಕ ಘಟನೆಗಳು ಸರ್ಕಾರಿ ವ್ಯವಸ್ಥೆಯನ್ನೇ ಬುಡ ಮೇಲು ಮಾಡುತ್ತಿವೆ. ಸಂಘದಿಂದ ಸಾಲ ಪಡೆದವರು ಅದನ್ನು ನಿಯಮಿತವಾಗಿ ಮರುಪಾವತಿ ಮಾಡಬೇಕು. ಆಗ ಮಾತ್ರ ಸಹಕಾರಿ ಸಂಘಗಳು ಉಳಿಯಲು ಬೆಳೆಯಲು ಸಾಧ್ಯ ಎಂದರು.
ಕಡಿಮೆ ಬಡ್ಡಿಯಲ್ಲಿ ಸಂಘದಿಂದ ಸಾಲ ಪಡೆದು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಈ ಸಹಕಾರ ಸಂಘ ನಿಮ್ಮದು ಇದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಿಮ್ಮದೇ ಆಗಿದೆ.
ಸರ್ಕಾರದ ಬೆಳೆ ವಿಮೆ ಸೌಲಭ್ಯ ಸರಿಯಾಗಿ ಎಲ್ಲರೂ ಪಡೆಯಬೇಕು. ನಿಗದಿತ ಕಾಲಾವಧಿಯಲ್ಲಿ ವಿಮಾ ಕಂತು ಪಾವತಿ ಮಾಡಬೇಕು. ಆಗ ಮಾತ್ರವೇ ಆರ್ಥಿಕ ಹಾನಿಗೆ ಸರ್ಕಾರ ಪರಿಹಾರ ನೀಡುತ್ತದೆ ಇದು ಎಲ್ಲರೂ ಅರಿತಿರಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸಿ ಸಿ ಪಾಟೀಲ ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಕಟ್ಟಡಕ್ಕೆ ೫ ಲಕ್ಷಗಳ ಸಹಾಯಧನ ನೀಡಿ ಕಟ್ಟಡ ನಿರ್ಮಾಣಕ್ಕೆ ಸಚಿವರು ಸಹಕರಿಸಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಲ್ಲಿಸಿ, ಸಚಿವರಿಗೆ ಸನ್ಮಾನಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ರುದ್ರಪ್ಪ ಮಸ್ಕಿನಭಾವಿ, ಉಪಾಧ್ಯಕ್ಷ ರುದ್ರಪ್ಪ ವಡ್ಡರ, ನಿರ್ದೇಶಕರಾದ ಕಲ್ಲಪ್ಪ ಬೆಟಗೇರಿ, ಗವಿಸಿದ್ದಪ್ಪ ರೇವಡಿ, ರಾಜಶೇಖರಯ್ಯ ವಸ್ತ್ರದ, ಮಲ್ಲನಗೌಡ ಪಾಟೀಲ, ಶಂಕ್ರಪ್ಪ ಕುಂಬಾರ, ಅಂದನಯ್ಯ ಪಟ್ರಿಮಠ, ಮಂಜುನಾಥ ಕರಿಯಲ್ಲಪ್ಪನವರ, ಅನ್ನಪೂರ್ಣಾ ಹಡಗಲಿ, ನೀಲವ್ವ ರವದಿ, ಸಕ್ರಪ್ಪ ರಾಮತಾಳ, ಉಮೇಶ ಮುದಕಣ್ಣನವರ, ನಗರ ಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.


Gadi Kannadiga

Leave a Reply