This is the title of the web page
This is the title of the web page

Please assign a menu to the primary menu location under menu

State

ಗೋಲು ಹೊಡೆದು ಹಾಕಿ ಕ್ರೀಡಾ ಕೌಶಲ್ಯ ಪ್ರದರ್ಶಿಸಿದ ಸಚಿವ ಎಚ್.ಕೆ.ಪಾಟೀಲ


ಗದಗ ಆ.೨೮: ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣಕ್ಕೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸೋಮವಾರದಂದು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಟರ್ಫ ಹಾಕಿ ಮೈದಾನವನ್ನು ವೀಕ್ಷಿಸಿದ ಅವರು ಹಾಕಿ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಸಚಿವರಿಗೆ ಪ್ರದರ್ಶಿಸಿದರು. ಸಚಿವ ಎಚ್.ಕೆ.ಪಾಟೀಲ ಅವರು ಹಾಕಿ ಕ್ರೀಡಾಪಟುಗಳಿಗೆ ಕಮ್ಮಿ ಇಲ್ಲದಂತೆ ತಮ್ಮಲ್ಲಿ ಅಡಗಿರುವ ಹಾಕಿ ಕೌಶಲ್ಯವನ್ನು ಪ್ರದರ್ಶಿಸಿದರು. ಗುರಿ ಸಾಧನೆಗೆ ಮರಳಿ ಪ್ರಯತ್ನ ಮಾಡು ಎನ್ನುವಂತೆ ಸಚಿವರು ಚೆಂಡನ್ನು ನಿಖರವಾಗಿ ಬಾರಿಸುವ ಮೂಲಕ ಗೋಲು ಹೊಡೆದಿದ್ದು ಮೈದಾನದಲ್ಲಿ ನೆರೆದಂತಹ ಕ್ರೀಡಾಪಟುಗಳನ್ನು ರೋಮಾಂಚನಗೊಳಿಸಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಹಾಕಿ ತರಬೇತಿದಾರರು, ಕ್ರೀಡಾಪಟುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಹಾಕಿ ಕಿಟ್‌ನ್ನು ಸಚಿವರಾದ ಎಚ್.ಕೆ.ಪಾಟೀಲ ವಿತರಿಸಿದರು.


Leave a Reply