This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ತವರೂರಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳ,ಸಾರ್ವಜನಿಕರ ಪರದಾಟ-ಸಚಿವ ಶ್ರೀರಾಮುಲು ಸ್ಪಂದಿಸಲು ಮನವಿ


ಬಳ್ಳಾರಿ ಜೂನ್ ೨೨. ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ದಿನ ನಿತ್ಯ ವಿದ್ಯಾರ್ಥಿಗಳು ಬಸ್ಸಿಗಾಗಿ ನೂಕುನುಗ್ಗಲು ಯಿಂದ ಕಾಲೇಜು ತಲುಪಲು ಪರದಾಡುತ್ತಿದ್ದಾರೆ. ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಗಳಾದ ಮದಾಪುರ,ಹೊನ್ನಹಳ್ಳಿ,ಮಾವಿನಹಳ್ಳಿ,ಸುಗ್ಗೇನಹಳ್ಳಿ, ಗೋನಾಳು,ಏಳುಬೆಂಚಿ ಗ್ರಾಮದಿಂದ ಹೊಸದರೋಜಿಯಲ್ಲಿ ಬಸ್ಸಿಗೆ ದಿನ ನಿತ್ಯ ಕಾಯುವ ಪರಿಸ್ಥಿತಿ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆÀ ಉಂಟಾಗಿದೆ. ಸಾರಿಗೆ ಸಚಿವರು ಬಳ್ಳಾರಿ ಉಸ್ತುವಾರಿ ಸಚಿವರು ನಮ್ಮ ಭಾಗದವರು ಆದರೂ ಬಸ್ಸುಗಳಿಗಾಗಿ ಪರದಾಡುವಂತಾಗಿದೆ. ಇವರು ಗ್ರಾಮಗಳ ಪರಿಸ್ಥಿತಿಯನ್ನು ಕಾಣದೆ ಆಳ್ವಿಕೆ ನಡೆಸುತ್ತಿದ್ದಾರೆ. ಇದು ಘನಘೋರವಾಗಿದೆ ಬೆಳಿಗ್ಗೆ೬:೩೦ ರಿಂದ ೧೦:೦೦ ಗಂಟೆಯವರೆಗೆ ಬಸ್ಸುಗಳು ವ್ಯವಸ್ಥೆ ಇಲ್ಲದಂತಾಗಿದೆ. ಈ ರೀತಿಯಾಗಿ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ. ಎಷ್ಟೇ ಹೋರಾಟ ಮಾಡಿದರು ಅಧಿಕಾರಿಗಳಿಗೆ ಮನವಿ ಪತ್ರಗಳು ನೀಡಿದರು ಅದಕ್ಕೆ ಪ್ರತಿಫಲ ಸಿಗದಂತೆ ಆಗಿದೆ. ಇದರಿಂದ ಸಮಯ ಮೀರಿದ ತಕ್ಷಣ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿ ಶಾಲಾ ಮತ್ತು ಕಾಲೇಜುಗಳಿಗೆ ಗೈರು ಹಾಜರಾಗುತ್ತಾರೆ. ಬೆಳಿಗ್ಗೆ ಬರುವಂತಹ ಅಂತರ ರಾಜ್ಯ ಬಸ್ಸುಗಳಾದ ಅನಂತಪುರ, ಮಂತ್ರಾಲಯ, ಮತ್ತೆ ಕರ್ನಾಟಕದ ರಾಜ್ಯದ ಬಸ್ಸುಗಳಾದ ಇವು ಅಂತರ ರಾಜ್ಯ ಬಸ್ಸು ಎಂದು ನಿಲುಗಡೆ ಮಾಡುವುದಿಲ್ಲ. ಮತ್ತೆ ಗಂಗಾವತಿ ಮತ್ತು ಬೆಂಗಳೂರು ಹೋಗುವ ಬಸ್ಸು ಕೂಡಾ ನಿಲುಗಡೆ ಮಾಡುವುದಿಲ್ಲ. ಮದ್ಯಾಹ್ನ ೦೩:೩೦ ರಿಂದ ಸಂಜೆ ೭:೩೦ರವರಿಗೆ ಯಾವುದೇ ಬಸ್ಸುಗಳು ಸಂಚಾರಿಸುವುದಿಲ್ಲ.ಇದರಿAದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕಾದು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಬಸ್ಸುಗಳು ಸಂಚಾರಕ್ಕೆ ಅನುಮತಿಸಬೇಕು ಮತ್ತು ವಿದ್ಯಾರ್ಥಿಗಳು ಹೋಗಲು ಅನುವು ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಸಾರಿಗೆ ಸಚಿವರಿಗೆ ಮನವಿ ಮಾಡುತಿದ್ದಾರೆ. ಈ ಸಂಧರ್ಭದಲ್ಲಿ ರಾಜಭಕ್ಷಿ,ಶಂಕರ್, ಶಿವು,ರಾಜ,ಮಹೇಂದ್ರ, ಸ್ವಾಮಿ, ಮಹಿಬೂ,ಸಂಗಮೇಶ, ಯುವರಾಜ, ಪವನ್, ಕುಮಾರಸ್ವಾಮಿ, ಓಂಪ್ರಕಾಶ್, ಆಕಾಶ, ಹೊನ್ನುರಸ್ವಾಮಿ,ಅನಿಲ,ದೇವಿಕಾ,ಮೀನಾ,ನವೀನ್, ಮೌನೇಶ,ಗಿರೀಶ್, ಕಾರ್ತಿಕ, ವಿರೇಂದ್ರ, ಮಂಜು, ತಿಪ್ಪೇಶ,ಪವನ್, ಮಾರುತಿ, ಉಮೇಶ, ಶ್ರೀಕಾಂತ, ಪೂಜಾ, ರಾಧಿಕಾ, ಲಕ್ಷ್ಮಿ, ಸೌಜನ್ಯ, ಸಂಗೀತ, ರಮ್ಯಾ, ರಂಜೀತ,ಕುರುಬರ ಹೇಮೇಶ್ವರ ಈ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಇವರಿಗೆ ಬಸ್ ಸೌಲಭ್ಯ ಕಲ್ಪಿಸಿ ಕೋಡಬೇಕೆಂದು ನಮ್ಮ ಜಿಲ್ಲೆಯವರಾದ ಸಾರಿಗೆ ಸಚಿವರಿಗೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.


Gadi Kannadiga

Leave a Reply