This is the title of the web page
This is the title of the web page

Please assign a menu to the primary menu location under menu

Local News

ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ


ಬೆಳಗಾವಿ:  ತಮ್ಮ ಹೊಲದಲ್ಲಿ ಕಬ್ಬಿನ ಬೆಳೆಗೆ ಕ್ರಿಮಿನಾಶಕ ಹೊಡೆಯುವ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಶಾಕ್ ನಿಂದ ಮೃತಪಟ್ಟಿದ್ದ ಬೆಕ್ಕಿನಕೇರಿ ಗ್ರಾಮದ ಭರಮಾ ಸು. ಚಿಕ್ಕೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ ಹೇಳಿ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಭರಮಾ ಚಿಕ್ಕೆ ಅವರು ಹೊಲದಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ಗಮನಿಸಿದೆ ಸ್ಪರ್ಷಿಸಿ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದಾದ ಬಳಿಕ ಅವರ ಪತ್ನಿ ಸಹ ಮಾನಸಿಕ ಅಸ್ವಸ್ಥರಾಗಿ ಮೃತಪಟ್ಟಿದ್ದರು.
 ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ “ಭರಮಾ ಅವರು ದುರ್ಮರಣಕ್ಕೀಡಾದ ಹಾಗೂ ಅವರ ಪತ್ನಿ ಸಹ ಮಾನಸಿಕ ಅಸ್ವಸ್ಥರಾಗಿ ಮೃತಪಟ್ಟ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವೆನಿಸಿದೆ” ಎಂದರಲ್ಲದೆ  ಮೃತರ ಮಕ್ಕಳಿಗೆ ಧೈರ್ಯವನ್ನು ತುಂಬಿ, ಹಾಗೂ ಅವರ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸಲು ಬದ್ಧರಾಗಿದ್ದು ಯಾವುದಕ್ಕೂ ಧೃತಿಗೆಡದಿರುವಂತೆ ತಿಳಿಸಿದರು.
ಇದೇ ವೇಳೆ ಅವರು ಸರಕಾರದಿಂದ ಬಿಡುಗಡೆ ಮಾಡಿಸಿದ 5 ಲಕ್ಷ ರೂ. ಪರಿಹಾರದ ಚೆಕ್ ನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಇದ್ದರು.

Leave a Reply