This is the title of the web page
This is the title of the web page

Please assign a menu to the primary menu location under menu

Local News

1.63 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಂಗರಗಾ ಗ್ರಾಮಕ್ಕೆ ಶುದ್ಧ ಕು‌ಡಿಯುವ ನೀರು ಪೂರೈಕೆ ಮಾಡುವ ಹಿತದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 1.63 ಕೋಟಿ ರೂ. ವೆಚ್ಚದ  ಕುಡಿಯುವ ನೀರಿನ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು, ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು.
” ಈ ಯೋಜನೆಯ‌ ಮೂಲಕ ಗ್ರಾಮದ ಗಲ್ಲಿಗಳಲ್ಲಿ ಪೈಪ್ ಲೈನ್ ಗಳು ಅಳವಡಿಕೆಯಾಗಲಿದ್ದು, ನಲ್ಲಿಗಳ ಮೂಲಕ ಮನೆ-ಮನೆಗಳಿಗೆ ನೀರು ಸರಬರಾಜು ಆಗಲಿದೆ‌. ಕಾಮಗಾರಿಗಳ ಸಮಯದಲ್ಲಿ ಸಾರ್ವಜನಿಕರಿಗಾಗಲಿ, ರಸ್ತೆಗಳಿಗಾಗಲಿ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು” ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗ್ರಾಮಸ್ಥರು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು, ಜನತೆಯ ಸನ್ಮಾನ ಸ್ವೀಕರಿಸಿ, ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಮಾಹಿತಿಯನ್ನು ಪಡೆದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಬಾಳು ಪಾಟೀಲ, ನಿವೃತ್ತಿ ತಳವಾರ, ಗೋಪಾಲ್ ಗೋಡಸೆ, ಅರ್ಜುನ ಪಾಟೀಲ, ಹನುಮಂತ ಪಾಟೀಲ, ಮನೋಹರ್ ಬೆಳಗಾಂವ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಸಂತೋಷ ಕಾಂಬಳೆ, ಸುಭಾಷ ತಳವಾರ, ಉಮೇಶ್ ಸೊನೋಲ್ಕರ್, ಮಲ್ಲಪ್ಪ ಕಾಂಬಳೆ, ಶಂಕರ ನಾಯ್ಕ್, ಮೀನಾ ಘೋಡ್ಸೆ, ಗಾಯತ್ರಿ ಪಾಟೀಲ, ವೈಶಾಲಿ ಖಾಂಡೇಕರ್, ಸಿಡಿಪಿಒ ಸುಮಿತ್ರಾ , ಕಾರ್ಯದರ್ಶಿ ಪರಿಮಳ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

Leave a Reply