ಬೆಳಗಾವಿ: ಇಲ್ಲಿಯ ಶಾಹುನಗರದಲ್ಲಿ ವಿದ್ಯುತ್ ದುರಂತದಲ್ಲಿ ೩ ಜನರು ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷಿ÷್ಮÃ ಹೆಬ್ಬಾಳಕರ್ ಧಾವಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಜೊತೆಗೆ ಸರಕಾರದಿಂದ ತಲಾ ೨ ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದರು. ಜೊತೆಗೆ ಲಕ್ಷಿ÷್ಮÃ ತಾಯಿ ಫೌಂಡೇಶನ್ ವತಿಯಿಂದ ಸಹ ಆರ್ಥಿಕ ಸಹಾಯ ಮಾಡಿದರು.
ವಿದ್ಯುತ್ ಶಾಕ್ £ಂದ ಇಲ್ಲಿನ ಶಾಹುನಗರದ ಮನೆಯಲ್ಲಿ ಶ£ವಾರ ಬೆಳ್ಳಂಬೆಳಗ್ಗೆ ಅವಘಡ ನಡೆದಿದ್ದು ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ. ವಾಚಮನ್ ಕೆಲಸ ಮಾಡುತ್ತಿದ್ದ ಈರಪ್ಪಾ ಲಮಾಣಿ (೫೦), ಶಾಂತವ್ವ ಲಮಾಣಿ (೪೫) ಹಾಗೂ ಇವರ ಮೊಮ್ಮಗಳು ಅನ್ನಪೂರ್ಣ ಲಮಾಣಿ ( ೮) ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಲಕ್ಷಿ÷್ಮÃ ಹೆಬ್ಬಾಳಕರ್, ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯವನ್ನು ತುಂಬಿದರು. ಜತೆಗೆ ಮುಖ್ಯಮಂತ್ರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಈ ಘಟನೆಯ ಬಗ್ಗೆ ವಿವರಿಸಿ, ಪ್ರತಿ ವ್ಯಕ್ತಿಗೆ ತಲಾ ೨ ಲಕ್ಷ ರೂ,ಗಳನ್ನು ಮಂಜೂರು ಮಾಡಿ ಕೊಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಪರಿಹಾರದ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಲಕ್ಷಿ÷್ಮÃ ತಾಯಿ ಫೌಂಡೇಶನ್ £ಂದ ಸಹ ಆರ್ಥಿಕ ಸಹಾಯ ಮಾಡಿದರು.
Gadi Kannadiga > Local News > ವಿದ್ಯುತ್ ದುರಂತಕ್ಕೆ ೩ ಸಾವು: ಸ್ಥಳಕ್ಕೆ ಧಾವಿಸಿದ ಸಚಿವೆ ಲಕ್ಷಿ÷್ಮÃ ಹೆಬ್ಬಾಳಕರ್ ; ತಲಾ ೨ ಲಕ್ಷ ರೂ.ಪರಿಹಾರ
ವಿದ್ಯುತ್ ದುರಂತಕ್ಕೆ ೩ ಸಾವು: ಸ್ಥಳಕ್ಕೆ ಧಾವಿಸಿದ ಸಚಿವೆ ಲಕ್ಷಿ÷್ಮÃ ಹೆಬ್ಬಾಳಕರ್ ; ತಲಾ ೨ ಲಕ್ಷ ರೂ.ಪರಿಹಾರ
Suresh12/08/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023