This is the title of the web page
This is the title of the web page

Please assign a menu to the primary menu location under menu

Local News

ಕೇಂದ್ರ ಸರ್ಕಾರದÀ ಸಾರ್ವಜನಿಕ ಒಡೆತನದ ಉದ್ದಿಮೆಗಳ ಹೆಚ್ಚುವರಿ ಭೂಮಿ ಮರಳಿ ಸರ್ಕಾರದ ಒಡೆತನಕ್ಕೆ: ಸಚಿವ ಮರುಗೇಶ್ ನಿರಾಣಿ


ಬೆಳಗಾವಿ ಸುವರ್ಣಸೌಧ ಡಿ.೨೭: ಕೇಂದ್ರ ಸರ್ಕಾರದ ಸಾರ್ವಜನಿಕ ಒಡೆತನ ಉದ್ದಿಮೆಗಳ ಬಳಕೆಯಾಗದೇ ಉಳಿದ ಹೆಚ್ಚುವರಿ ಭೂಮಿಯನ್ನು ರಾಜ್ಯ ಸರ್ಕಾರದ ಒಡೆತನಕ್ಕೆ ಮರಳಿ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ ಹೇಳಿದರು.
ವಿಧಾನಪರಿಷತ್‌ನಲ್ಲಿ ಮಂಗಳವಾರ ಶಾಸಕ ಗೋವಿಂದರಾಜು ಪರವಾಗಿ ಶಾಸಕ ಕೆ.ಎನ್.ತಿಪ್ಪೇಸ್ವಾಮಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕೋಲಾರ ಜಿಲ್ಲೆ ಕೆ.ಜಿ.ಎಫ್ ಬಳಿ ಕೇಂದ್ರ ಸರ್ಕಾರ ಒಡೆತನ ಉದ್ದಿಮೆಗಳಾದ ಬಿಜಿಎಲ್ ಹಾಗೂ ಬೆಮೆಲ್‌ಗೆ ರಾಜ್ಯ ಸರ್ಕಾರ ಭೂಮಿಯನ್ನು ಮಂಜೂರು ಮಾಡಿತ್ತು. ಇದರಲ್ಲಿ ಬಿ.ಜಿ.ಎಂ.ಎಲ್ ಬಳಕೆ ಮಾಡದಿರುವ ೯೬೭ ಎಕರೆ ಹಾಗೂ ಬೆಮೆಲ್ ಬಳಕೆ ಮಾಡದಿರುವ ೯೭೧.೩೩ ಎಕರೆ ಜಮೀನನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.
ಇದರ ಜೊತೆ ಉದ್ದಿಮೆಗೆ ಮಂಜೂರು ಮಾಡಿದ ೩೫೦೦ ಎಕರೆ ಭೂಮಿಯನ್ನು ಹಿಂದಿರುಗಿಸಲು ಕೇಂದ್ರ ಸರ್ಕಾರ ಸಿದ್ದವಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ೫೦೦ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವಂತೆ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿ ೩೫೦೦ ಎಕರೆ ಕಂದಾಯ ಭೂಮಿಯನ್ನು ಹಿಂಪಡೆಯಲು ಸಿದ್ದವಿದೆ. ಆದರೆ ಹೆಚ್ಚುವರಿಯಾಗಿ ಹಿಂದಿರುಗಿಸುತ್ತಿರುವ ೫೦೦ ಎಕರೆ ಭೂಮಿ ಮೇಲೆ ಹೆಚ್ಚಿನ ಋಣಬಾರಗಳಿವೆ ಮತ್ತು ಸರ್ವೆ ಕಾರ್ಯವು ನಡೆಯಬೇಕಿದೆ. ಇದರ ಹಿನ್ನಲೆಯಲ್ಲಿ ಪರಿಶೀಲಿಸಿ ಭೂಮಿ ಹಿಂಪಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ರೀತಿ ರಾಜ್ಯದಾದ್ಯಂತ ಕೇಂದ್ರ ಸರ್ಕಾರ ಸಾರ್ವಜನಿಕ ಒಡೆತನ ಉದ್ದಿಮೆಗಳಿಗೆ ನೀಡಿದ ಭೂಮಿಯಲ್ಲಿ ಬಳಕೆಯಾದ ಉಳಿದ ಭೂಮಿಯನ್ನು ರಾಜ್ಯ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳಲಾಗುವುದು. ಈ ಕುರಿತಂತೆ ಅನೇಕ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದರ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.
ಶಾಸಕ ಕೆ.ಎನ್.ತಿಪ್ಪೇಸ್ವಾಮಿ ಅವರು ಬಿಜಿಎಂಎಲ್ ಒಡೆತನದಲ್ಲಿ ೩೨ ಮಿಲಿಯನ್ ಟನ್ ಅಧಿಕ ಏಕ ಬಾರಿ ಸಂಸ್ಕರಿಸಿದ ಚಿನ್ನದ ಅದಿರು ಉಳಿದಿದೆ. ಇದನ್ನು ಖಾಸಗಿಯವರಿಗೆ ಹರಾಜು ಹಾಕುವ ಮುನ್ನ ಸರ್ಕಾರ ಕ್ರಮ ವಹಿಸಿ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.


Leave a Reply