ಹುಕ್ಕೇರಿ: ತಾಲೂಕಿನ ಯಾದಗೂಡ, ಅಮ್ಮಣಗಿ,ಹುಕ್ಕೇರಿ ಮತ್ತು ಸಂಕೇಶ್ವರ ನಗರಗಳಲ್ಲಿ ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಯವರು ಪಶು ಆಸ್ಪತ್ರೆ, ಬೀದಿ ದೀಪ ಅಳವಡಿಕೆ ,ಸಿ ಸಿ ರಸ್ತೆ, ಸಿ ಸಿ ಗಟಾರ, ರಸ್ತೆ ಗಳಿಗೆ ಮರು ಡಾಂಬರಿಕರಣ ,ಸಿ ಡಿ ನಿರ್ಮಾಣ ಸೇರಿ ದಂತೆ ಇಟ್ಟು 6 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಪೂಜೆ ಸಲ್ಲುಸುವ ಮೂಲಕ ಚಾಲನೆ ನೀಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಉಮೇಶ ಕತ್ತಿ ಹುಕ್ಕೇರಿ, ಸಂಕೆಶ್ವರ,ಅಮ್ಮಣಗಿ, ಯಾದಗೂಡ ಗ್ರಾಮದಲ್ಲಿ ಮೂಲ ಭೂತ ಸೌಲಭ್ಯಗಳ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ ,ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ ಇಲಾಖೆಗಳಿಂದ ಸುಮಾರು 150 ಕೋಟಿ ರೂಪಾಯಿಗಳ ಅನುದಾನ ಪಡೆದು ಇನ್ನೂಳಿದ ಕಾಮಗಾರಿ ಗಳನ್ನು ಕೈಕೊಳ್ಳಲಾಗುವದು ಎಂದರು .
ಈ ಸಂದರ್ಭದಲ್ಲಿ ಹುಕ್ಕೇರಿ ಪುರಸಭೆ ಅದ್ಯಕ್ಷ ಎ ಕೆ ಪಾಟೀಲ, ಸದಸ್ಯ ಮಹಾವೀರ ನಿಲಜಗಿ, ಸಿದ್ದು ಹಳಿಜೋಳ, ಪಿಕಾರ್ಡ ನಿರ್ದೆಶಕ ಪರಗೌಡಾ ಪಾಟೀಲ,ಬಸ್ಸು ಗಂಗಣ್ಣವರ, ಲೋಕೋಪಯೋಗಿ ಸಹಾಯಕ ಅಭಿಯಂತರ ಗೀರಿಶ ದೇಸಾಯಿ, ಇ ಓ ಉಮೇಶ ಸಿದ್ನಾಳ, ಅಭಿಯಂತರ ಪ್ರದೀಪ ಸಾವಂತ ಮೊದಲಾದವರು ಉಪಸ್ಥಿತರಿದ್ದರು.