This is the title of the web page
This is the title of the web page

Please assign a menu to the primary menu location under menu

Local News

ಜೂ.೨೭ ಹಾಗೂ ೨೮ ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಬೆಳಗಾವಿ,ಜೂ ೨೨ : ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಜೂನ್ ೨೭ ಮತ್ತು ೨೮ ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂನ್ ೨೭ ರಂದು ಬೆಳಿಗ್ಗೆ ೧೦.೩೦ ಗಂಟೆಯಿಂದ ಸಂಜೆ ೫.೩೦ ಗಂಟೆಯವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಯೋಜನೆಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯ ಸಚಿವರು, ಕೇಂದ್ರ ಸರ್ಕರ ಇವರೊಂದಿಗೆ ಭಾಗವಹಿಸಲಿದ್ದಾರೆ.
ಜೂನ್ ೨೮ ರಂದು ಬೆಳಿಗ್ಗೆ ೭ ಗಂಟೆಗೆ ಬೆಳಗಾವಿ ಕೋಟೆಯ ಕಡೆ ನಡಿಗೆ ಮಾಡಿ ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ಬೆಳಗಾವಿ ಕೋಟೆಯ ಸ್ವಚ್ಚತೆಯನ್ನು ವೀಕ್ಷಿಸುವರು. ಮುಂಜಾನೆ ೧೦ ಗಂಟೆಯಿಂದ ೧ ಗಂಟೆಯವರೆಗೆ ಬೆಳಗಾವಿ ಬಿ.ಐ.ಎಂ.ಎಸ್.ನ ಜನ ಔಷಧಿ ಕೇಂದ್ರಕ್ಕೆ ಬೇಟಿ ನಂತರ ಬೆಳಗಾವಿ ತಾಲ್ಲೂಕು ಅಗಸಗ ಗ್ರಾಮ ಪಂಚಾಯತಿಯ ಅಮೃತ್ ಸರೋಚರಕ್ಕೆ ಬೇಟಿ ನೀಡುವರು.
ಅಲ್ಲಿಂದ ಬೆಳಗಾವಿ ತಾಲ್ಲೂಕು ಕಡೋಲಿ ಮತ್ತು ಅಗಸಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಉಓಖಇಉಂ ಅಡಿಯಲ್ಲಿ ಬರುವ ಶಾಲೆಗಳ ಕಾಮಗಾರಿಗಳ ವೀಕ್ಷಣೆ ಮಾಡುವರು. ಮಧ್ಯಾಹ್ನ ೨ ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮನೆಯಲ್ಲಿ ಭೋಜನ ಹಾಗೂ ಮಧ್ಯಾಹ್ನ ೩ ಗಂಟೆಗೆ ಬೆಳಗಾವಿ ಭಾರತೀಯ ಜನತಾ ಪಕ್ಷದ ಕಚೇರಿಗೆ ಬೇಟಿ ಮಾಡುವರು.
ಸಾಯಂಕಾಲ ೪.೫೦ ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಬೆಳಗಾವಿಯ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.


Gadi Kannadiga

Leave a Reply