This is the title of the web page
This is the title of the web page

Please assign a menu to the primary menu location under menu

Local News

ಯಶಸ್ಸಿಗೆ ಸತತ ಪ್ರಯತ್ನವೇ ಅಗತ್ಯ ಎಸ್.ಎಸ.ಎಲ್.ಸಿ. ವಿದ್ಯಾರ್ಥಿಗಳಿಗೆ “ಮಿಶನ್ ೬೨೫” ಕಾರ್ಯಾಗಾರ


ಹುಕ್ಕೇರಿ: ಯಾವುದೇ ಕ್ಷೇತ್ರದಲ್ಲಿಯೂ ಸತತ ಅಧ್ಯಯನ, ಅವಿರತ ಪರಿಶ್ರಮ ಹಾಗೂ £ರಂತರತೆ ಕಾಪಾಡಿಕೊಂಡಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು £ವೃತ್ತ ಪ್ರಾಧ್ಯಾಪಕ ಸಲೀಂ ಕಾದ್ರೊಳ್ಳಿ ಅಭಿಪ್ರಾಯ ಪಟ್ಟರು.
ಹುಕ್ಕೇರಿ ವಿರಕ್ತಮಠದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಜೈಭಾರತ ಫೌಂಡೇಶನ್ ಆಯೋಜಿಸಿದ್ದ ಎಸ್.ಎಸ.ಎಲ್.ಸಿ. ಮಕ್ಕಳಿಗೆ “ಮಿಶನ್ ೬೨೫” ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಪಾಲಕರು ಹೆಚ್ಚಿನ ಶ್ರಮವಹಿಸಿ ಮಕ್ಕಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮವಹಿಸುತ್ತಾರೆ. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ನಡೆಸಿ ಪಾಲಕರಿಗೆ ಗೌರವ ತಂದು ಕೊಡಬೇಕಾದದ್ದು ಅವರ ಕರ್ತವ್ಯವಾಗಿದೆ ಎಂದರು.
ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶಿವಾನಂದ ಝಿರಲಿ ಮಾತನಾಡಿ ವ್ಯಕ್ತಿತ್ವ ವಿಕಸನ ತಕ್ಷಣ ಆಗುವುದಿಲ್ಲ. ಕಪ್ಪೆಚಿಪ್ಪಿನೊಳಗೆ ಮುತ್ತೊಂದು ಹೇಗೆ ರಚನೆಯಾಗುತ್ತದೆಯೋ ಅಷ್ಟೊಂದು ಪರಿಶ್ರಮದ ಅವಶ್ಯಕತೆ ವ್ಯಕ್ತಿತ್ವ ವಿಕಸನಕ್ಕೆ ಇದೆ. ಪ್ರತಿದಿನ ಇದಕ್ಕೆ ಪ್ರಯತ್ನಿಸಬೇಕೆಂದರು. ಸಕಾರಾತ್ಮಕ ಆಲೋಚನೆ, ವಿಷಯಜ್ಞಾನ, ದೇಹಭಾಷೆ, ಆತ್ಮವಿಶ್ವಾಸ, ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾದ ಎ.ಬಿ.ಘೋಡಗೇರಿ, ಸು£Ãಲ ಕಾಜಗಾರ ಮಾತನಾಡಿದರು. ಪ್ರಾರಂಭದಲ್ಲಿ ಪ್ರಾಂಶುಪಾಲರಾದ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕರಾದ ಕುಮಾರ ಬಡಿಗೇರ ಕಾರ್ಯಕ್ರಮ £ರೂಪಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ೭೫ ಕ್ಕೂ ಹೆಚ್ಚು ಎಸ್.ಎಸ.ಎಲ್.ಸಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.


Leave a Reply