This is the title of the web page
This is the title of the web page

Please assign a menu to the primary menu location under menu

Local News

ವ್ಯಾಪಾರಿಗಳು ಆರ್ಥಿಕವಾಗಿ ಸಬಲಗೊಳ್ಳಲು ಯೋಜನೆ ಅನುಕೂಲ: ಶಾಸಕ ಅಭಯ ಪಾಟೀಲ


ಬೆಳಗಾವಿ: ಬೀದಿ ವ್ಯಾಪಾರಿಗಳು ಆರ್ಥಿಕವಾಗಿ ಸದೃಢ ಮಾಡುವ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆಯೂ ನೂರಾರು ವ್ಯಾಪಾರಿಗಳಿಗೆ ಚೆಕ್ ಮೂಲಕ ಹಣ ನೀಡಿದ್ದೇವೆ. ಇಂದು ಸುಮಾರು 150 ವ್ಯಾಪಾರಿಗಳಿಗೆ ಚೆಕ್ ನೀಡುತ್ತಿದ್ದೇವೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

10 ಸಾವಿರ ರೂಪಾಯಿ ಒಳ್ಳೆಯ ರೀತಿ ಬಳಸಿಕೊಂಡು ವಾಪಸ್ ತುಂಬಿದರೆ 20 ಸಾವಿರ ನೀಡಲಾಗುತ್ತದೆ. 20 ಸಾವಿರ ರೂಪಾಯಿ ತುಂಬಿದರೆ 50 ಸಾವಿರ ನೀಡಲಾಗುತ್ತದೆ. ನಮ್ಮ ದಕ್ಷಿಣ ಕ್ಷೇತ್ರದ ವ್ಯಾಪಾರಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಉಪಯುಕ್ತರು ಮಹಾನಗರ ಪಾಲಿಕೆ ಭಾಗ್ಯಶ್ರೀ ಹುಗ್ಗಿ ನಗರಸೇವಕರಾದ ಗಿರೀಶ್ ಧೋಂಗಡಿ, , ರಾಜು ಭಾಟ್ಕಂಡಿ, ನಿತಿನ್ ಜಾಧವ್, ರವಿ ಸಾಂಬ್ರೇಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply