This is the title of the web page
This is the title of the web page

Please assign a menu to the primary menu location under menu

Local News

ಗಣೇಶೋತ್ಸವ ಸಿದ್ದತೆ ಪರಿಶೀಲಿಸಿದ ಶಾಸಕ ಅಭಯ ಪಾಟೀಲ್


ಬೆಳಗಾವಿ: ಗಣೇಶೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿ ಸಿದ್ದತೆ ಕಾರ್ಯ ಭರದಿಂದ ನಡೆದಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಅವರು ಗಣೇಶೋತ್ಸವದ ಮೆರವಣಿಗೆಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.

ಕಳೆದ 2 ವರ್ಷಗಳಿಂದ ಕೋವಿಡ್ ಕರಾಳ ಛಾಯೆಯಿಂದ ಗಣೇಶೋತ್ಸವ ಆಚರಣೆಗೂ ಬ್ರೆಕ್ ಬಿದ್ದಿತ್ತು ಈ ವರ್ಷ ಅದ್ದೂರಿ ಆಚರಣೆಗೆ ಮುಂದಾಗಿದ್ದು ಬೆಳಗಾವಿಯಲ್ಲಿ ಬರದ ಸಿದ್ದತೆ ನಡೆದಿದೆ. ಈ ಹಿನ್ನೆಲೆ ಇಂದು ದಕ್ಷಿಣ ಶಾಸಕ ಅಭಯ ಪಾಟೀಲ ಅವರು ನಗರ ಪ್ರದಕ್ಷಿಣೆ ಮಾಡಿ ಪರಿಶೀಲನೆ ಮಾಡಿದರು.

ಶಹಾಪುರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು. ರಸ್ತೆಯ ಮಧ್ಯೆದಲ್ಲಿ ಬೆಳೆದಿರುವ ರೆಂಬೆ-ಕೊಂಬೆಗಳನ್ನು ಕತ್ತರಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಲೋಕಮಾನ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಲದ ಪದಾಧಿಕಾರಿಗಳು, ನಗರಸೇವಕರು, ಹೆಸ್ಕಾಂ, ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.


Gadi Kannadiga

Leave a Reply