This is the title of the web page
This is the title of the web page

Please assign a menu to the primary menu location under menu

Local News

ಹುತಾತ್ಮರಾದ ಸೈನಿಕರ ಕುಟುಂಬಸ್ಥರಿಗೆ ಶಾಸಕ ಅನಿಲ್ ಬೆನಕೆ ಗೌರವ ವಂದನೆ ಸಲ್ಲಿಕೆ


ಬೆಳಗಾವಿ : 75ನೇ ಸ್ವಾತಂತ್ರ್ಯದ ಅಮೃತ್ ಮಹೋತ್ಸವ ನಿಮಿತವಾಗಿ ಬೆಳಗಾವಿ ಶಾಸಕ ಅನಿಲ್ ಬೇನಕೆ ನೇತೃತ್ವದಲ್ಲಿ ಬೈಕ್ ರ್‍ಯಾಲಿ ಮತ್ತು ಸ್ವತಂತ್ರ ಸೇನಾನಿಗಳಿಗೆ ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರ ಜೊತೆ ಆಜಾಧಿಕಾ ಅಮೃತ್ ಮಹೋತ್ಸವ ಸ್ವತಂತ್ರೋತ್ಸವದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ಛತ್ರಪತಿ ಸಂಭಾಜಿ ಮಹಾರಾಜ ಉದ್ಯಾನವನ ದಿಂದ ಪ್ರಾರಂಭಗೊಂಡು ರಾಣಿ ಚೆನ್ನಮ್ಮ ವೃತ್ತದ ವರೆಗೆ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಶಹೀದ್ ದಶರಥ ನಿಂಗಪ್ಪ ಗೋಳ, ಶಹೀದ್ ಬಾಬುರಾವ್ ಮನಗೌಕರ್ ಶಹೀದ್ ಫಕೀರ ಅನಿಗೋಕರ್, ಶಹೀದ್, ಸತೀಶ್ ಸೂರ್ಯವಂಶಿ, ಶಹೀದ್ ರಾಹುಲ್ ಭೂಪಳೆ, ಶಹೀದ್ ದಿನಕರ್ ಬನವಾಡಿ, ಶಹೀದ್ ಯಶು ಚೌಗುಲೆ, ಶಹೀದ್ ರಾಮಚಂದ್ರ ಹಿಪ್ಪರಗಾ, ಶಹೀದ್ ಕೃಷ್ಣಾಜಿ ಕಬ್ಬುರ್, ಶಹೀದ್ ದತಾರಾಂ ಸಿಂದೋಡ್ಕರ್, ಶಹೀದ್ ಮೋಹನ್ ಕಾಂಬಳೆ ಸದಾಶಿವ್ ಬಡವಳೆ, ಶಹೀದ್ ಶಾಮರಾವ್ ಶಿಂದೆ, ಇವರ ಕುಟುಂಬ. ಸದಸ್ಯರಗಳಗೆ ಶಾಸಕ ಅನಿಲ್ ಬೇನಕೆ ಸನ್ಮಾನಿಸಿ ಸಾಷ್ಟಾಂಗ ನಮಸ್ಕಾರ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ನಗರ. ಸೇವಕರಗಳು ಭಾರತೀಯ ಜನತಾ ಪಕ್ಷದ ನಗರ ಮಾಧ್ಯಮ ಸಂಚಾಲಕರು ಶರದ ಪಾಟೀಲ್ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಶಾಲಾ ಮಕ್ಕಳು ಸ್ವತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೇನಾನಿಗಳ ಕುಟುಂಬಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.


Gadi Kannadiga

Leave a Reply