This is the title of the web page
This is the title of the web page

Please assign a menu to the primary menu location under menu

Local News

ಶ್ರೀ. ಜ್ಯೋತಿಬಾ ಮಂದಿರಕ್ಕೆ ಶಾಸಕ ಅನಿಲ ಬೆನಕೆ ಬೇಟಿ


ಬೆಳಗಾವ ೧೩ : ದಿ ೧೩ ರ ಬುದವಾರದಂದು ತಮ್ಮ ಹುಟ್ಟು ಹಬ್ಬದ ನಿಮಿತ್ಯವಾಗಿ ಕುಲದೇವರಾದ ಶಿವಬಸವ ನಗರದ ಶ್ರೀ. ಜ್ಯೋತಿಬಾ ಮಂದಿರಕ್ಕೆ ಬೇಟಿ ನೀಡಿ ದೇವರ ಆಶಿರ್ವಾದವನ್ನು ಪಡೆದುಕೊಂಡರು ನಂತರದಲ್ಲಿ ಗುರುಪೂರ್ಣಿಮೆ ನಿಮಿತ್ಯವಾಗಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರೊಂದಿಗೆ ತೆರಳಿ ಕಾರಂಜಿಮಠದ ಶ್ರೀ. ಗುರುಸಿದ್ದ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡು ಕಮಾರಟ್ಟಿಯಲ್ಲಿನ ಗೋಶಾಲೆಗೆ ಬೇಟಿ ನೀಡಿ ಮೇವು, ಹಣ್ಣು ಹಂಪಲಗಳನ್ನು ವಿತರಿಸಿದರು.
ಎಂದಿನಂತೆ ತಮ್ಮ ಶಾಸಕರ ಕಾರ್ಯಾಲಯಕ್ಕೆ ಬೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಲೇ ಕ್ಷೇತ್ರದ ಜನರೊಂದಿಗೆ ಹಾಗೂ ವಿವಿಧ ಗ್ರಾಮಗಳ ಅಭಿಮಾನಿಗಳೊಂದಿಗೆ ತಮ್ಮ ೫೭ ನೇ ಜನ್ಮ ದಿನವನ್ನು ಆಚರಿಸಿಕೊಂಡರು. ವಿವಿಧ ಸ್ಥಳಗಳಲ್ಲಿ ಡೆಂಗ್ಯೂ ಲಸಿಕೆಗಳನ್ನು ಈ ಸಂದರ್ಭದಲ್ಲಿ ವಿತರಿಸಿದರು.
ಕಚೇರಿ ಸಿಬ್ಬಂದಿಗಳ ಜೊತೆಗೆ ಸೌಹಾರ್ದ ಸಾಧಿಸಿದಾಗ ಕಚೇರಿಗೆ ಬರುವ ಎಲ್ಲ ಸಾರ್ವಜನಿಕರಿಗೆ ಸರಿಯಾಗಿ ಅವರ ಆಶೋತ್ತರಗಳನ್ನು ನಿವಾರಿಸಲು ಎಲ್ಲ ತರಹದ ಪ್ರಯತ್ನವನ್ನು ಮಾಡಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕಾರ್ಯಕರ್ತರಿಗೆ ಶುಭ ಹಾರೈಸಿದರು ಮತ್ತು ಸಿಹಿಯನ್ನು ಹಂಚಲಾಯಿತು.
ಶಾಸಕರ ಜನ್ಮ ದಿನದ ನಿಮಿತ್ಯ ಅವರ ಎಲ್ಲ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಕ್ಷೇತ್ರದ ಎಲ್ಲ ಜನರ ಆಶಿರ್ವಾದ ಸದಾ ನಮ್ಮ ಮೇಲಿರುವುದರಿಂದ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃಧ್ದಿ ಪಥದತ್ತ ಸಾಗುವಂತಾಗಿದೆ ಹಿಗೇಯೆ ಕ್ಷೇತ್ರದಲ್ಲಿನ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುವುದು ಎಂದ ಅವರು ಹುಟ್ಟು ಹಬ್ಬಕ್ಕೆ ಶುಭಾಷಯ ಕೋರಿದ ಎಲ್ಲ ಆತ್ಮೀಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.


Gadi Kannadiga

Leave a Reply