This is the title of the web page
This is the title of the web page

Please assign a menu to the primary menu location under menu

Local News

ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾರ್ವಜನಿಕರು ಭಾಗಿಯಾಗುವಂತೆ ಶಾಸಕ ಅನಿಲ ಬೆನಕೆ ಕರೆ


ಬೆಳಗಾವಿ ೧೩ :ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಬೆಳಗಾವಿ ನಗರದ ಕೋಟೆ ಕೆರೆ ಹತ್ತಿರದಲ್ಲಿನ ದೇಶದ ಅತ್ಯಂತ ಎತ್ತರದ ೧೧೦ ಮೀಟರ್ ಎತ್ತರದ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ದ್ವಜಸ್ತಂಭದ ಮೇಲೆ ೭೫ ಕೇಜಿ ತೂಕದ ದ್ವಜವನ್ನು ಬಟನ್ ಒತ್ತುವ ಮೂಲಕ ದ್ವಜಾರೋಹಣವನ್ನು ನೆರವೇರಿಸಿದರು.
ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ಕೋಟೆ ಕೆರೆ ಆವರಣದಲ್ಲಿನ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರು ದೇಶಕ್ಕೆ ಸ್ವಾತಂತ್ರö್ಯ ಸಿಕ್ಕು ೭೫ ವರ್ಷಗಳಾದ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ನಗರದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ನಾವೆಲ್ಲ ಸೇರಿಕೊಂಡು ನೆರವೇರಿಸಿದ್ದೇವೆ. ಕಾರ್ಯಕ್ರಮದಲ್ಲಿ ಎಲ್ಲ ಸಾರ್ವಜನಿಕರು ಮುಖಂಡರುಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದು, ಜನರೂ ಕೂಡಾ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಬೆಳಗಾವಿ ಕೋಟೆ ಕೆರೆಯಲ್ಲಿರುವ ದೇಶದ ಬೃಹತ್ ಧ್ವಜವನ್ನು ನಿರಂತರವಾಗಿ ಹಾರಿಸುವ ಯೋಚನೆಯಿದೆ. ಆದರೆ ಬೃಹತ ಧ್ವಜವು ಮಳೆಗಾಲದಲ್ಲಿ ನೆನೆದು ಹರಿಯುತ್ತಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಬೇಸಿಗೆ ಕಾಲದಲ್ಲಿ ನಿರಂತರವಾಗಿ ಧ್ವಜವನ್ನು ಹಾರಿಸಲು ಪ್ರಯತ್ನಿಸಲಾಗುವುದು ಎಂದರು.
ಧ್ವಜಾರೋಹಣದ ಬಳಿಕ ಕೋಟೆಕೆರೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ನಗರದ ಹಾಯ್ದು ಚೆನ್ನಮ್ಮ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ಹಾಗೂ ೭೫ ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಯಿತು. ಅನೇಕ ಗಣ್ಯರು, ಅಧಿಕಾರಿಗಳು, ನಾಗರಿಕರು ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಜಾಥಾದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ವಂದೇ ಮಾತರಂ ಹಾಗು ಭಾರತ ಮಾತೆಗೆ ಜಯಘೋಷಣೆ ಹಾಕಿದರು ಹಾಗೂ ರಸ್ತೆಯ ಎರಡು ಕಡೆಗಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ನಾಗರಿಕರು ದೇಶಪ್ರೇಮವನ್ನು ಮೆರೆದರು. ನಂತರದಲ್ಲಿ ಶಾಸಕ ಅನಿಲ ಬೆನಕೆರವರು ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ರಾಷ್ಟ್ರಗಿತೆಯೊಂದಿಗೆ ಕಾಲ್ನಡಿಗೆ ಜಾಥಾ ಹಾಗೂ ತಿರಂಗಾ ಯಾತ್ರೆಯು ಸಮಾರೋಪಗೊಂಡಿತು.
ಈ ವೇಳೆ ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ನಗರದ ವಿವಿಧ ಶಾಲಾ ಕಾಲೇಜು ಮಕ್ಕಳು ಸಾರ್ವಜನಿಕರು ಉಪಸ್ಥಿತರದ್ದರು.

 


Gadi Kannadiga

Leave a Reply