ಬೆಳಗಾವಿ ೧೭: ದಿನಾಂಕ ೧೪.೦೩.೨೦೨೩ ರಂದು ಬೆಳಗಾವಿ ಉತ್ತರ ಮತಕ್ಷೆತ್ರದ ಶಾಸಕ ಅನಿಲ ಬೆನಕೆ ಅವರು ಈ ಹಿಂದೆ ನೀಡಿದ ಮಾತಿನಂತೆ ಇಂದು ಬೆಳಗಾವಿ ನಗರದ ಡಾ. ಬಿ. ಆರ್. ಅಂಬೇಡ್ಕರ ಉದ್ಯಾನವನದಲ್ಲಿ ಸುಸಜ್ಜಿತ ಗ್ರಂಥಾಲಯ, ಸಾಂಸ್ಕೃತಿಕ ಭವನ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐ.ಎ.ಎಸ್. ಕೆ.ಎ.ಎಸ್ ಐ.ಪಿ.ಎಸ್ ಕೋಚಿಂಗ ಸೆಂಟರ್ ನಿರ್ಮಾಣ ಮಾಡಲು ರೂ. ೧ ಕೋಟಿ ೩೦ ಲಕ್ಷ ರೂಪಾಯಿಯ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಚಾಲನೆ ನೀಡಿದರು.
ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು ಕ್ಷೇತ್ರದ ಸಮಾಜದ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನೀಡಿದ ಮಾತಿನಂತೆ ಇಂದು ಬೆಳಗಾವಿ ನಗರದ ಭೀಮ್ಸ್ ಆಸ್ಪತ್ರೆ ಎದುರುಗಡೆ ಇರುವ ಡಾ. ಬಾಬಾಸಾಹೇಬ ಅಂಬೇಡ್ಕರ ಉದ್ಯಾನವನದಲ್ಲಿ ರಾಜ್ಯ ಸರ್ಕಾರ ವತಿಯಿಂದ ೧ ಕೋಟಿ ೩೦ ಲಕ್ಷ ಅನುದಾನದಲ್ಲಿ ಉದ್ಯಾನವನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ಭವನ, ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರ ನಿರ್ಮಾಣ ಮಾಡಲು ಭೂಮಿ ಪೂಜೆಯನ್ನು ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬೆಳಗಾವಿ ನಗರಕ್ಕೆ ಬಂದು ಹೋಗಿದ್ದಾರೆ, ಬೆಳಗಾವಿಗೆ ಅಂತಹ ಮಹಾನ ನಾಯಕರು ಬಂದು ಹೋಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಮತ್ತು ಬೆಳಗಾವಿ ಪುಣ್ಯ ಭೂಮಿಯಾಗಿದೆ ಎಂದರು. ಉದ್ಯಾನವನ ಅಭಿವೃಧ್ದಿ ಹೊಂದಿದ ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಎಂದರು. ನಗರದಲ್ಲಿ ಬಡ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವುದು ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಗುರಿಯಾಗಿದೆ ಈ ಉದ್ಯಾನವನದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಕೈಗೊಂಡು ೩ ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆನಂದ ಪಾಟೀಲ, ನಗರ ಸೇವಕ ಸಂದೀಪ ಜಿರಗಿಹಾಳ, ಸವಿತಾ ಕಾಂಬಳೆ, ರೂಪಾ ಚಿಕ್ಕಲದಿನ್ನಿ, ಡಾ. ಬಿ. ಆರ್. ಅಂಬೇಡ್ಕರ ಸಾಂಸ್ಕೃತಿಕ ಭವನ ಸಮೀತಿ ಸದಸ್ಯರಾದ ಹಾಗೂ ದಲಿತ ಮುಖಂಡರಾದ ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ಮಂಜುನಾತ ಪಮ್ಮಾರ, ಮಹಾದೇವ ರಾಠೋಡ, ಪ್ರಸಾದ ದೇವರಮನಿ, ಪ್ರೀತಿ ಕುಕಡೆ, ಸಂತೋಷ ಕಾಂಬಳೆ, ದೀಪಕ ದಬಾಡಿಯಾ, ಯಲ್ಲಪ್ಪ ಕೋಲಕಾರ, ದುರ್ಗೇಶ ಮೈತ್ರಿ ಸೇರಿಂದತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Gadi Kannadiga > Local News > ನುಡಿದಂತೆ ನಡೆದ ಶಾಸಕ ಅನಿಲ ಬೆನಕೆ