This is the title of the web page
This is the title of the web page

Please assign a menu to the primary menu location under menu

Local News

ನೆಹರು ನಗರದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ


ಬೆಳಗಾವಿ ೦೬ : ದಿ ೦೬ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃಧ್ದಿಯ ಹರಿಕಾರರಾದ ಶಾಸಕ ಅನಿಲ ಬೆನಕೆರವರು ನೆಹರು ನಗರದಲ್ಲಿನ ಎಲ್ಲ ರಸ್ತೆ ಮತ್ತು ಗಟಾರು ನಿರ್ಮಾಣ ಹಾಗೂ ನೆಹರು ನಗರದ ಬಸವಣ್ಣ ಮಂದಿರದ ಹತ್ತಿರದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನೆಹರು ನಗರದ ನಿವಾಸಿಗಳ ಬೇಡಿಕೆಯಂತೆ ಇಲ್ಲಿನ ಎಲ್ಲ ರಸ್ತೆಗಳ ನಿರ್ಮಾಣ ಮತ್ತು ಗಟಾರು ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಇಂದು ಚಾಲನೆ ನೀಡಲಾಗಿದೆ ಅದರಂತೆಯೇ ನೆಹರು ನಗರದ ಬಸವಣ್ಣ ಮಂದಿರದ ಹತ್ತಿರದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಸಹಿತ ಭೂಮಿ ಪೂಜೆಯನ್ನು ನೇರವೇರಿಸಲಾಗಿದೆ ಎಂದರು. ಗುತ್ತಿಗೆದಾರರು ಕಾಮಗಾರಿಗಳನ್ನು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿಗಳನ್ನು ಉತ್ತಮ ಗುಣಮಟ್ಟತೆಯೊಂದಿಗೆ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ನೆಹರು ನಗರದ ಪಂಚ ಕಮೀಟಿ, ನಗರ ಸೇವಕರು, ಕಾರ್ಯಕರ್ತರು, ಗುತ್ತಿಗೆದಾರರು ಹಾಗೂ ಅಲ್ಲಿನ ರಹವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply