This is the title of the web page
This is the title of the web page

Please assign a menu to the primary menu location under menu

Local News

ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಕ್ಕೆ ಶಾಸಕ ಅನಿಲ ಬೆನಕೆ ಚಾಲನೆ


ಬೆಳಗಾವಿ ೦೮ : ದಿ ೦೮. ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಪಶುವೈಧ್ಯಕೀಯ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಕ್ಕೆ ಚಾಲನೆ ನೀಡುವುದರೊಂದಿಗೆ ಪಶು ವೈಧ್ಯಕೀಯ ಇಲಾಖೆಯಿಂದ ಕ್ಷೇತ್ರದ ಫಲಾನುಭವಿಗಳಿಗೆ ಹಸು ಮತ್ತು ಎಮ್ಮೆಗಳನ್ನು ಖರಿದಿಸಲು ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಜಿ ರವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಪಶುಗಳ ಚಿಕಿತ್ಸೆಗಾಗಿ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನದ ವಿಶಿಷ್ಟ ಸೌಲಭ್ಯವನ್ನು ಜನರಿಗೆ ಒದಗಿಸಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಪಶುಗಳಿಗೆ ತೊಂದರೆಗಿಡಾಗಿದ್ದಲ್ಲಿ ಅವುಗಳ ಚಿಕಿತ್ಸೆಯಗಾಗಿ ಸಹಾಯವಾಣಿ ೧೯೬೨ ಸಂಖ್ಯೆಗೆ ಸಂಪರ್ಕ ಮಾಡಬೇಕೆಂದು ಮಾಹಿತಿಯನ್ನು ನೀಡಿದರು.
ನಂತರದಲ್ಲಿ ಪಶುವೈಧ್ಯಕೀಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪಶು ಇಲಾಖೆಯಿಂದ ಕ್ಷೇತ್ರದ ಫಲಾನುಭವಿಗಳಿಗೆ ಹಸು ಮತ್ತು ಎಮ್ಮೆಗಳನ್ನು ಖರೀದಿಸಲು ಚೆಕ್‌ಗಳನ್ನು ವಿತರಿಸಿ ಫಲಾನುಭವಿಗಳಿಗೆ ಆರ್ಥಿಕವಾಗಿ ಸಬಲರಾಗಬೇಕೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಶುವೈಧ್ಯಕೀಯ ಇಲಾಖೆ ಅಧಿಕಾರಿಗಳಾದ ಆನಂದ ಪಾಟೀಲ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply