ಬೆಳಗಾವಿ, : ನಗರದ ಬಿಮ್ಸ ಆವರಣದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಸೂಪರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಎರಡು ಮಹಡಿಗಳ ಕಾಮಗಾರಿ ಮುಗಿದಿದ್ದು, ಅಧಿವೇಶನ ಅಂತ್ಯದಲ್ಲಿ ಉದ್ಘಾಟನೆಗೆ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.
ಇಂದು ಬಿಮ್ಸ ಆವರಣದಲ್ಲಿ ಆಸ್ಪತ್ರೇಯ ಕಾಮಗಾರಿ ವೀಕ್ಷಿಸಿದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು, ಸಭೆಯಲ್ಲಿ ಅಧಿವೇಶನದ ಕೊನೆಯಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವುದಿದೆ. ಅಷ್ಟರಲ್ಲಿ ಬಾಕಿ ಕಾಮಗಾರಿ ಮುಗಿಯಬೇಕು. ಅದಕ್ಕಿಂತ ಮುಂಚೆ ತಾಯಿ ಮಕ್ಕಳ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರಗೆ ಅಡಿಗಲೂ ಸಮಾರಂಭ ಮಾಡುತ್ತೆವೆ. ಮ್ಯಾನ್ ಪಾವರ, ಸಲಕರಣೆಗಳ ಕೊರತೆ ಇದ್ದು, ನಾಳೆ ಸಿಎಂ ಮತ್ತು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭೇಟಿ ಆಗಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಚರ್ಚಿಇದರು.
ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರನಲ್ಲಿ ಎರಡು ಮಹಡಿ ಕಾಮಗಾರಿ ಆಗವೇಕು ಎಂದು ಸಂಕಲ್ಪ ಮಾಡಲಾಗಿತ್ತು, ಆಪ್ರಕಾರ ಕಾಮಗಾರಿ ಆಗಿದೆ. ಸಲಕರಣೆಗಳು ಮತ್ತು ಮ್ಯಾನ್ ಪಾವರಗಳ ಕೊರತೆ ಇದೆ, ಹಾಗಾಗಿ ಸಿಎಂ ಆರೋಗ್ಯ ಸಚಿವರಿಗೆ ಭೇಟಿ ಆಗಲಿದ್ದೇವೆ ಎಂದು ತಿಳಿಸಿದರು. ಸಲಕರಣೆಗಳು ಇಲ್ಲದೆ ಆಸ್ಪತ್ರೆ ಉದ್ಘಾಟನೆ ಮಾಡುವುದು ಸರಿ ಅಲ್ಲ ಹಾಗಾಗಿ ಸಂಬಂಧಿಸಿದವರ ಜೊತೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಶಾಸಕರೊಂದಿಗೆ ಬಿಮ್ಸ ಡೈರೆಕ್ಟರ ಆಶೋಕ ಶೆಟ್ಟಿ, ಬಿಮ್ಸ ಸಿಇಓ ಶಾಹಿದಾ ಆಫ್ರೀನ ಬಾನು ಬಾಳ್ಳಾರಿ, ಜಿಲ್ಲಾ ಸರ್ಜನ ಸುಧಾಕರ ಆರ್.ಸಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಅಧಿವೇಶನ ಅಂತ್ಯದಲ್ಲಿ ಸೂಪರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ : ಶಾಸಕ ಅನಿಲ ಬೆನಕೆ
ಅಧಿವೇಶನ ಅಂತ್ಯದಲ್ಲಿ ಸೂಪರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ : ಶಾಸಕ ಅನಿಲ ಬೆನಕೆ
Suresh07/12/2022
posted on
