This is the title of the web page
This is the title of the web page

Please assign a menu to the primary menu location under menu

Local News

ಶಾಸಕ ಅನಿಲ ಬೆನಕೆಯವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಬೇಟಿ


ಬೆಳಗಾವಿ ೨೧: ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಇಂದು ಬೆಳಗಾವಿಯ ಉತ್ತರ ವಿಧಾನ ಸಭಾ ಮತಕ್ಷೇತ್ರದಲ್ಲಿ ವಿವಿಧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಬಳಲುತ್ತಿರುವುದರಿಂದ ಬಡಿಗ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರೆ ಕೆಲಸಗಾರರು ಹಾಗೂ ಇನ್ನುಳಿದ ಕಾರ್ಮಿಕರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವರಿಗೆ ಬೇಕಾಗುವ ಸುಮಾರು ೫೦೦೦ ಕಾರ್ಮಿಕ ಕಿಟ್‌ಗಳನ್ನು ಹೆಚ್ಚುವರಿಯಾಗಿ ಪೂರೈಸುವ ಕುರಿತು ಕಾರ್ಮಿಕ ಸಚಿವರದ ಶಿವರಾಮ ಹೆಬ್ಬಾರ ಅವರನ್ನು ಬೆಂಗಳೂರಿನಲ್ಲಿ ಅವರ ಕಾರ್ಯಾಲಯದಲ್ಲಿ ಬೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಅದಲ್ಲದೇ ಕಾರ್ಮಿಕರಿಗೆ ಸರ್ಕಾರದಿಂದ ದೊರಕುವ ಪಿಂಚಣಿ ಸೌಲಭ್ಯ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವೈಧ್ಯಕೀಯ ಸೌಲಭ್ಯಗಳು, ವಿಮಾ ಸೌಲಭ್ಯಗಳು ಹಾಗೂ ಇತರೆ ಎಲ್ಲ ಯೋಜನೆಗಳ ಕುರಿತು ಸಚಿವರೊಂದಿಗೆ ಚರ್ಚಿಸಿದರು.

 


Gadi Kannadiga

Leave a Reply