ಬೆಳಗಾವಿ : ದಿÀ ೦೬ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಬಸವಣಕುಡಚಿಯ ದೇವರಾಜ ಅರಸ ಕಾಲೊನಿಯಲ್ಲಿನ ಅಷ್ಠವಿನಾಯಕ ಮಂದಿರದಲ್ಲಿ ಕಾಲೊನಿಯ ಮುಖಂಡರುಗಳೊಂದಿಗೆ ದೇವರಾಜ ಅರಸ ಕಾಲೋನಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ದೇವರಾಜ ಅರಸ ಕಾಲೋನಿಯಲ್ಲಿ ಇರುವ ಅನುಭವ ಮಂಟಪ ನಿರ್ವಹನೆಯನ್ನು ಮಾಡಲು ನಗರ ಸೇವಕರು ಹಾಗೂ ಸ್ಥಳೀಯ ಮುಖಂಡರುಗಳನ್ನೊಳಗೊಂಡ ಸದಸ್ಯರ ಕಮೀಟಿ ಮಾಡುವುದು, ಅಷ್ಠವಿನಾಯಕ ಮಂದಿರದ ಪಕ್ಕದಲ್ಲಿ ಇರುವ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಆರ್. ಓ. ವಾಟರ್ ಪ್ಲಾಂಟ್ ಅಳವಡಿಸುವುದು ಹಾಗೂ ಅದಕ್ಕೆ ಒಂದು ಬೋರವೇಲ್ ಕೊರೆಯಿಸಿ ಪೈಪಲೈನ್ ಅಳವಡಿಸುವ ಕುರಿತು ಚರ್ಚಿಸಲಾಯಿತು. ತದನಂತರದಲ್ಲಿ ಶಿವಾಲಯ ಮಂದಿರ ಪಕ್ಕದಲ್ಲಿನ ಶಿವಾಲಯ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕೂರಲು ಬೆಂಚ್ಗಳನ್ನು ಹಾಗೂ ಹೊರಂಗಣ ಕ್ರೀಡಾ ಹಾಗೂ ಜಿಮ್ ಸಾಮಗ್ರಿಗಳನ್ನು ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ನಂತರದಲ್ಲಿ ಶಾಸಕರು ದೇವರಾಜ ಅರಸ ಕಾಲೋನಿಯಲ್ಲಿನ ರಹವಾಸಿಗಳ ಸಮಸ್ಯೆಗಳನ್ನು ಆಲಿಸಿ ಕೂಡಲೇ ತ್ವರಿತವಾಗಿ ರಸ್ತೆ ಹಾಗೂ ಗಟಾರು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಇಲ್ಲಿನ ಸಾರ್ವಜನಿಕರ ಸಹಕಾರದಿಂದ ದೇವರಾಜ ಅರಸ ಕಾಲೋನಿಯಲ್ಲಿ ಸಾಕಷ್ಠು ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಂದೆಯು ತಮ್ಮ ಸೇವೆಯನ್ನು ಮಾಡಲು ಆಶಿರ್ವದಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರಾದ ಮೊದಗೇಕರ, ದೇವರಾಜ ಅರಸ ಕಾಲೊನಿ ವೆಲಪೇರ್ ಅಸೋಸಿಯೇಷನ್ ಚೇರಮನ್ನರು ಹಾಗೂ ಸದಸ್ಯರು, ಅಷ್ಠ ವಿನಾಯಕ ಮಂದಿರ ಕಮೀಟಿ ಸದಸ್ಯರು, ನಂದಾ ಸುಣಗಾರ, ನೂತನ ಮಜಗಾವಿ, ದಿವಟೆ (ವಕೀಲರು) ಹಾಗೂ ಯುವಕ ಸಂಘದ ಸದಸ್ಯರು ಮತ್ತು ಅಲ್ಲಿನ ರಹವಾಸಿಗಳು ಉಪಸ್ಥಿತರಿದ್ದರು.
Gadi Kannadiga > Local News > ಬಸವಣಕುಡಚಿ ದೇವರಾಜ ಅರಸ ಕಾಲೊನಿಯ ರಹವಾಸಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಅನಿಲ ಬೆನಕೆ