This is the title of the web page
This is the title of the web page

Please assign a menu to the primary menu location under menu

Local News

ನಗರಾಭಿವೃಧ್ದಿ ಸಚಿವರನ್ನು ಬೇಟಿ ಮಾಡಿದ ಶಾಸಕ ಅನಿಲ ಬೆನಕೆ


ಬೆಳಗಾವಿ ೧೬ :ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಇಂದು ಬೆಂಗಳೂರಿನಲ್ಲಿ ಸನ್ಮಾನ್ಯ ನಗರಾಬಿವೃಧ್ದಿ ಸಚಿವರಾದ ಬೈರತಿ ಬಸವರಾಜ ರವರನ್ನು ಬೇಟಿಯಾಗಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಬೆಳಗಾವಿ ಇವರಿಗೆ ಸಮಾಜದ ಬಡ ಮಕ್ಕಳ ಸಲುವಾಗಿ ವಸತಿ ನಿಲಯ ಸ್ಥಾಪಿಸಲು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸದಾಶಿವ ನಗರದಲ್ಲಿರುವ ಸರ್ವೆ ನಂ. ೧೩೬೫/ಬಿ, ಸಿಟಿಎಸ್ ನಂ. ೧೦೯೧೭ ರಲ್ಲಿಯ ೧ ಎಕರೆ ೦೯ ಗುಂಟೆಯ ಪೈಕಿ ೨೨ ಗುಂಟೆ ಜಾಗೆಯನ್ನು ಲೀಸ್ ಆಧಾರದ ಮೇಲೆ ನೀಡಲಾಗಿ ಸದ್ಯ ಸದರಿ ಜಾಗದ ಲೀಜ್ ಅವಧಿಯು ಮುಕ್ತಾಯವಾಗಿರುವುದರಿಂದ ಬಡ ಮರಾಠಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಲುವಾಗಿ ಒಂದು ಸುಸಜ್ಜಿತ ವಸತಿ ನಿಲಯ ನಿರ್ಮಾಣ ಮಾಡುವ ಸಲುವಾಗಿ ಸದರಿ ಸ್ಥಳದ ಲೀಜ್ ಅವಧಿಯನ್ನು ೩೦ ವರ್ಷಗಳ ಅವಧಿಗೆ ಮುಂದುವರೆಸಿ ಮರಾಠಾ ಸಮಾಜದ ಬಡ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂಬ ಪ್ರಸ್ತಾವಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಶಾಸಕರ ಪ್ರಸ್ತಾವಣೆಯನ್ನು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡು ಅನುಮೋದನೆ ನೀಡುವಂತೆ ನಗರಾಬಿವೃಧ್ದಿ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.


Gadi Kannadiga

Leave a Reply