This is the title of the web page
This is the title of the web page

Please assign a menu to the primary menu location under menu

Local News

ಕೊಳಗೇರಿ ನಿಗಮದಿಂದ ಶೀಘ್ರದಲ್ಲೇ ಮನೆಗಳ ನಿರ್ಮಾಣ : ಶಾಸಕ ಅನಿಲ ಬೆನಕೆ


ಬೆಳಗಾವಿ ೦೨ : ನಗರದಲ್ಲಿ ಇರುವ ವಂಟಮೂರಿ ಹಾಗೂ ವೈಭವ ನಗರದ ಕೊಳಗೇರಿ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಹಾಗೂ ಕೊಳಗೇರಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಮಾನಿ, ಫನಿರಾಜ ಅವರು ಭೇಟಿ ನಿಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು.
ಶನಿವಾರ ಬೆಳಿಗ್ಗೆ ಶಾಸಕ ಅನಿಲ ಬೆನಕೆ ಹಾಗೂ ಅಧಿಕಾರಿಗಳು ಜನರ ಸಮಸ್ಯೆ ಆಲಿಸಲು ವಂಟಮೂರಿ ಹಾಗೂ ವೈಭವ ನಗರದಲ್ಲಿ ಇರುವ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಜನರ ವಿವಿಧ ಸಮಸ್ಯೆಗಳನ್ನು ಶೀಘ್ರದಲ್ಲೆ ನಿವಾರಣೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈಗಾಗಲೇ ವೈಭವ ನಗರದಲ್ಲಿ ಕೊಳಗೇರಿ ಜನರಿಗೆ ನಿಗಮದಿಂದ ಮನೆಗಳ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಅನಿಲ ಬೆನಕೆ ಅವರು ಭರವಸೆ ನೀಡಿದರು. ವಂಟಮೂರಿಯಲ್ಲಿ ಶೀಘ್ರದಲ್ಲೇ ಕೊಳಗೇರಿ ಪ್ರದೇಶ ಎಂದು ಘೋಷಿಸಿ ಅಲ್ಲಿಯು ಸಹ ಮನೆಗಳ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕರು ಪೌರ ಕಾರ್ಮಿಕರಿಗೆ ಸ್ವಚ್ಚತೆ ಕಾಪಾಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರಾದ ರಾಜಶೇಖರ ಡೋಣಿ, ಲಕ್ಷ್ಮೀ ರಾಠೋಡ, ಚಿಕ್ಕಲದಿನ್ನಿ ಹಾಗೂ ಅಧಿಕಾರಿಗಳು ಸ್ಥಳಿಯ ವಾಸಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply