This is the title of the web page
This is the title of the web page

Please assign a menu to the primary menu location under menu

Local News

ಶಾಸಕ ಬಾಲಚಂದ್ರ ಜಾರಕಿಹೊಳಿ ೩೫.೬೯ ಕೋಟಿ ರೂ ಆಸ್ತಿ ಒಡೆಯ


ಮೂಡಲಗಿ : ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಸಲ್ಲಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು ೩೫,೬೯,೯೨,೧೮೬ ರೂ.ಗಳ ಒಡೆಯರಾಗಿದ್ದು, ಇವರ ಹೆಸರಿನಲ್ಲಿ ಯಾವುದೇ ಸಾಲವಿಲ್ಲ.
ಬಾಲಚಂದ್ರ ಜಾರಕಿಹೊಳಿ ಬಳಿ ೮,೫೫,೭೭೭ ರೂ. ನಗದು ಹಣ ಇದೆ. ೧.೫೦ ಕೋಟಿ ರೂ.ಗಳ ಎಫ್.ಡಿ ಇದೆ. ಉಳಿತಾಯ ಖಾತೆಗಳಲ್ಲಿ ೬೨,೧೫,೬೮೮ ರೂ. ಜಮಾ ಇದೆ. ೩೪,೪೫,೫೪೧ ರೂ ಎನ್‌ಎಸ್‌ಎಸ್ ಪೋಸ್ಟಲ್ ಸೇವಿಂಗ್ಸ್ ಇನ್ಸೂರನ್ಸ್ ಇದ್ದು, ೧೦,೯೭,೮೬೨ ರೂ. ಮೌಲ್ಯದ ಹುಂಡೈ ಐ೨೦ ಅಸ್ಟಾ ಕಾರ್ ಹೊಂದಿದ್ದಾರೆ. ೯೨,೫೭,೮೧೦ ರೂ. ಮೌಲ್ಯದ ೧೫೧೦ ಗ್ರಾಂ ಚಿನ್ನವಿದ್ದರೆ, ೮,೧೪,೧೦೦ ರೂ. ಮೌಲ್ಯದ ೧೦ ಕೆಜಿ ಬೆಳ್ಳಿ ಇದೆ. ೩೧,೧೩,೮೫,೦೫೨ ರೂ. ಮೌಲ್ಯದ ಕೃಷಿ, ಕೃಷಿಯೇತರ ಭೂಮಿ ಹಾಗೂ ವಾಸಿಸುವ ಮನೆ ಸೇರಿದೆ. ಬಾಲಚಂದ್ರ ಜಾರಕಿಹೊಳಿ ಅವರು ೧,೨೯,೩೦,೭೦೩ ರೂ.ಗಳನ್ನು ಬೇರೆಯವರಿಗೆ ಸಾಲವನ್ನಾಗಿ £Ãಡಿದ್ದಾರೆ.
ಕಳೆದ ೨೦೧೮ ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ವಿವರ ಗಮ£ಸಿದರೆ ಈ ಬಾರಿ ಬಾಲಚಂದ್ರ ಜಾರಕಿಹೊಳಿ ಅವರ ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ ೧೯,೩೫,೭೦,೯೭೯ ರೂ.ಗಳ ಆಸ್ತಿಯನ್ನು ತೋರಿಸಿದ್ದು ಈ ಸಲ ೩೫,೬೯,೯೨,೧೮೬ ರೂ. ಸಲ್ಲಿಸಿದ್ದಾರೆ. ಚರಾಸ್ತಿ ಮತ್ತು ಸ್ಥಿರಾಸ್ತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ, ಈಗಿನ ಮಾರುಕಟ್ಟೆ ಬೆಲೆ ಹೆಚ್ಚಳವಾಗಿದ್ದರಿಂದ ಇವರ ಆಸ್ತಿ ಮೌಲ್ಯ ೧೬,೩೪,೨೧,೨೦೭ ರೂ. ಹೆಚ್ಚಳವಾದಂತಾಗಿದೆ


Leave a Reply