This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಮರಾಠಾ ಅಭಿವೃಧ್ದಿ ಪ್ರಾಧಿಕಾರದ ಕಚೇರಿಯ ಶೀಘ್ರ ಸ್ಥಾಪಿಸಲು ಶಾಸಕ ಬೆನಕೆ ಮನವಿ


ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಕರ್ನಾಟಕ ಮರಾಠ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಮ್.ಜಿ. ಮೂಳೆ ಅವರನ್ನು ಬೆಂಗಳೂರಿನ ಅವರ ಕಾರ್ಯಾಲಯದಲ್ಲಿ ಬೇಟಿಯಾಗಿ ಉತ್ತರ ಕರ್ನಾಟಕದಲ್ಲಿ ವiರಾಠ ಸಮುದಾಯದ ಜನರು ಅಪಾರ ಸಂಖ್ಯೆಯಲ್ಲಿ ಇವರುವುದರಿಂದ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆ ಇರುವುದರಿಂದ ಅವರ ಅನುಕೂಲಕ್ಕಾಗಿ ಮರಾಠ ಅಭಿವೃಧ್ದಿ ಪ್ರಾಧಿಕಾರದ ಶಾಖಾ ಕಚೇರಿಯನ್ನು ಶೀಘ್ರವಾಗಿ ಬೆಳಗಾವಿಯಲ್ಲಿ ಪ್ರಾರಂಭಿಸುವಂತೆ ಮನವಿಯನ್ನು ಮಾಡಿದರು. ಅಧ್ಯಕ್ಷರು ಸರ್ಕಾರದ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ನಂತರದಲ್ಲಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ ಆಹ್ವಾನಿಸಲಾದ ಶ್ರೀ. ಶಹಾಜಿರಾಜೇ ಸಮೃಧ್ದಿ ಯೋಜನೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಕಾರ್ಯಕ್ರಮಗಳ ಕುರಿತು ಚರ್ಚಿಸದ ಅವರು ಮರಾಠ ಸಮಾಜದ ಜನರನ್ನು ಶಸಕ್ತರನ್ನಾಗಿ ಹಾಗೂ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಕರ್ನಾಟಕ ಮರಾಠಾ ಸಮುದಯಗಳ ಅಭಿವೃಧ್ದಿ ನಿಗಮದಿಂದ ರೂ. 50,000 ದಿಂದ 2,00,000 ಗಳ ವರೆಗೆ ಶೇ 4 ರ ಬಡ್ಡಿ ದರದಲ್ಲಿ ಸಹಾಯಧನವನ್ನು ಒದಗಿಸುತ್ತಿದೆ ಅದರಂತೆಯೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿಯಲ್ಲಿ ಮರಾಠ ಸಮುದಾಯದ 18 ವರ್ಷದಿಂದ 15 ವರ್ಷದ ಯುವಕ ಯುವತಿಯರ ಕೌಶಲ್ಯಗಳನ್ನು ಅಭಿವೃಧ್ದಿಪಡಿಸಿ ಉದ್ಯೋಗಮುಖಿಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಆಯ್.ಟಿ.ಆಯ್.ಎಸ್, ಜಿ.ಟಿ.ಟಿ.ಎಸ್, ಕೆ.ಜಿ.ಟಿ.ಟಿ.ಆಯ್ ಗಳಂತಹ ಇತ್ಯಾದಿ ಸಂಸ್ಥೆಗಳ ವತಿಯಿಂದ ಅಲ್ಪಾವಧಿ ಕೋರ್ಸಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಕರ್ನಾಟಕದ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ತಿಳಿಸಿದ ಅವರು ಮರಾಠ ಸಮಾಜದ ಜನತೆಯು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮರಾಠ ಸಮಾಜದ ರೈತರಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯುವ ಯೋಜನೆಯನ್ನು ಶೀಘ್ರವಾಗಿ ಅರ್ಜಿಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದರು.


Gadi Kannadiga

Leave a Reply