ಬೆಳಗಾವಿ : ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯ 15 ನೇ ಹಣಕಾಸು ಯೋಜನೆಯಡಿಯಲ್ಲಿ ನಾಲಾ, ಗಣ ತ್ಯಾಜ್ಯ ಸಂಸ್ಕರಣಾ ಘಟಕದ ಶೇಡ್ ಸೇರಿದಂತೆ ರಸ್ತೆಗೆ ಪೇವರ್ಸ ಅಳವಡಿಸುವ ಹಾಗೂ ಡ್ರೈನೇಜ್ ನಿರ್ಮಾಣ ಕಾಮಗಾರಿಗಳಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ಇಂದು ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಉಷಾ ಕಾಲೋನಿಯಲ್ಲಿ ರೂ. 10.00 ಲಕ್ಷಗಳ ಅನುದಾನದಡಿಯಲ್ಲಿ ನಾಲಾ ನಿರ್ಮಾಣ, ಅಶೋಕ ನಗರದ ನಾಲಾದ ಹತ್ತಿರದಲ್ಲಿ ರೂ. 10.00 ಲಕ್ಷಗಳ ಅನುದಾನದಡಿಯಲ್ಲಿ ಗಣತ್ಯಾಜ್ಯ ಸಂಸ್ಕರಣಾ ಘಟಕ ಶೆಡ್ ನಿರ್ಮಾಣ, ಚಾಂಗದೇವ ಗಲ್ಲಿಯ ರಸ್ತೆಗೆ ರೂ. 11.00 ಲಕ್ಷಗಳ ಅನುದಾನದಡಿಯಲ್ಲಿ ರಸ್ತೆಗೆ ಪೇವರ್ಸ ಅಳವಡಿಕೆ ಕಾಮಗಾರಿ ಅದರಂತೆಯೇ ರೇಣುಕಾ ನಗರದ ರೆವೆನ್ಯೂ ಕಾಲೋನಿಯ ವೆಲಕಮ್ ಹಾಲ್ ಹತ್ತಿರದಲ್ಲಿ ರೂ. 7.00 ಲಕ್ಷಗಳಲ್ಲಿ ಆರ್.ಸಿ.ಸಿ ಡ್ರೈನೇಜ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದ ಅವರು ಒಟ್ಟಾರೆಯಾಗಿ ಕ್ಷೇತ್ರದಲ್ಲಿ 38 ಲಕ್ಷ ರೂಗಳ ಅನುದಾನದಡಿಯಲ್ಲಿ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ಅಲ್ಲಿನ ಸ್ಥಳೀಯರ ಮೂಲಭೂತ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ ಅವರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ಸಚಿನ ಕಾಂಬಳೆ, ಚೌಗುಲಾ, ಸಹಾಯಕ ಅಭಿಯಂತರುಗಳಾದ ಆಷ್ಪಾಕ್, ಯಲ್ಲಪ್ಪ ಹಾಗೂ ಗುತ್ತಿಗೆದಾರರಾದ ವಿನೋದ ಪಾಟೀಲ, ಯುವರಾಜ ಕದಮ, ವಿನೋದ, ಧಾಮಣೇಕರ ಮತ್ತು ನಗರ ಸೇವಕರಾದ ಹಣಮಂತ ಕೊಂಗಾಲಿ, ಸ್ಥಳೀಯ ಮುಖಂಡರುಗಳಾದ ಸತೀಶ ಮಾಳವದೆ, ಸಾಗರ ವರಪೆ, ಜಿ.ವಿ. ಹಿರೇಮಠ, ಪ್ರಕಾಶ ಹೆಗಡೆ, ನಾಗೇಶ ಪಾಟೀಲ, ಸೋಮಶೇಖರ ಹಿರೇಮಠ, ಬಸವರಾಜ ಹಳಂಗಳಿ, ಶೀಂಘೇ, ಪ್ರಭು, ಶಿವಾನಂದ ಸವದತ್ತಿ, ಹಿರಿಯರಾದ ಗಾಣ ಗೇರ, ದಂಡಿನ, ಬಸವರಾಜ ಜಿರಲಿ, ಹಣಮಂತ ಕಾಗಲಕರ, ಸುರೇಶ ಯಾಧವ, ವಿಲಾಸ ಕೆರೂರ, ಸಂತೋಷ ದೇಸಾಯಿ, ನವಿನ ಹಿರೇಮಠ ಸೇರಿದಂತೆ ಅಲ್ಲಿನ ಸ್ಥಳೀಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.