ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆರವರು ಬೆಳಗಾವಿಯ ಪುರಾತಣ ದೇವಸ್ಥಾನಗಳ ಅಭಿವೃಧ್ದಿ ಹಾಗೂ ಬೆಳಗಾವಿ ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕಾಗಿ 5 ಕೋಟಿಗಳ ಅನುದಾನವನ್ನು ಮಂಜೂರು ಮಾಡುವಂತೆ ಇಂದು ನವದೆಹಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕೇಂದ್ರ ರಾಜ್ಯ ಸಚಿವರಾದ ಶ್ರೀಪಾದ ನಾಯಕ್ ರವರನ್ನು ಬೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾದ್ಯಮದವರಿಗೆ ತಿಳಿಸಿದ ಶಾಸಕರು ಬೆಳಗಾವಿ ಉತರ ಕ್ಷೇತ್ರದಲ್ಲಿ ಇರುವ ಪುರಾತಣ ದೇವಸ್ಥಾನಗಳಾದ ಕಣಬರ್ಗಿಯ ಪ್ರಸಿದ್ದ ಶ್ರೀ. ಸಿದ್ದೇಶ್ವರ ದೇವಸ್ಥಾನ, ಶಿವಬಸವ ನಗರದ ಶ್ರೀ. ಜ್ಯೋತಿಬಾ ದೇವಸ್ಥಾನ, ಮಠ ಗಲ್ಲಿ ಹಾಗೂ ಬಸವಣಗಲ್ಲಿಯಲ್ಲಿರುವ ಚಿಕ್ಕ ಬಸ್ತಿ ಮತ್ತು ದೊಡ್ಡ ಬಸ್ತಿ ಹಾಗೂ ಮಹಾಂತೇಶ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಅನುಭವ ಮಂಟಪದ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟಾರೆಯಾಗಿ 5 ಕೋಟಿಗಳ ಅನುದಾನವನ್ನು ಮಂಜೂರು ಮಾಡುವಂತೆ ಮಾನ್ಯ ಕೇಂದ್ರ ರಾಜ್ಯ ಪ್ರವಾಸೋದ್ಯಮ ಸಚಿವರಾದ ಶ್ರಿಪಾದ ನಾಯಕ್ ರವರಿಗೆ ಮನವಿಯನ್ನು ಸಲ್ಲಿಸಿಲಾಗಿದೆ. ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.