ಸೈನಿಕ ಭೀಮಣ್ಣ ಗುರಿಕಾರ ಸನ್ಮಾನಿಸಿ ಶುಭ ಹಾರೈಸಿದ ಶಾಸಕ ದೊಡ್ಡನಗೌಡ ಪಾಟೀಲ

Murugesh Shivapuji
ಸೈನಿಕ ಭೀಮಣ್ಣ ಗುರಿಕಾರ ಸನ್ಮಾನಿಸಿ ಶುಭ ಹಾರೈಸಿದ ಶಾಸಕ ದೊಡ್ಡನಗೌಡ ಪಾಟೀಲ
WhatsApp Group Join Now

ಕುಷ್ಟಗಿ:- ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಸೈನಿಕ ಭೀಮಣ್ಣ ಗುರಿಕಾರ ಇವರು ರಜೆಯ ಮೇಲೆ ಬಂದಿದ್ದ ಇವರನ್ನು ಮತ್ತೆ ಜಮ್ಮು ಕಾಶ್ಮೀರದ ಆಪರಷೇನ್ ಸಿಂಧೂರ ಆರಂಭವಾದ ಹಿನ್ನಲೆ ಪಾಕಿಸ್ತಾನಕ್ಕೆ ಯುದ್ಧ ಪ್ರಾರಂಭವಾದ ಹಿನ್ನಲೆ ಪೆಹಲ್ಗಾದ್ ತೆರಳುವ ಸಮಯದಲ್ಲಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಕುಷ್ಟಗಿ ಪಟ್ಟಣದ ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಸನ್ನಾನಿಸಿ ಶುಭ ಹಾರೈಸಿದರು.

ನಂತರ ಭೀಮಣ್ಣ ಗುರಿಕಾರ ಮಾತನಾಡಿ ನಾನು ಜಮ್ಮು ಕಾಶ್ಮೀರದ ಭಾರತ ದೇಶದ ಗಡಿ ಭಾಗದವಾದ ಪೆಹಲ್ಗಾಮ್ ನಲ್ಲಿ ವೀರ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು ಆದರೆ ಮನೆಯಲ್ಲಿ ನನ್ನ ಕುಟುಂಬಸ್ಥರ ಮನೆಯ ಮದುವೆಗೆ ಒಂದು ತಿಂಗಳು ರಜೆಯ ಮೇಲೆ ಊರಿಗೆ ಬಂದಿದ್ದೆ ಆದರೆ ಪಾಕಿಸ್ತಾನಕ್ಕೆ ಮತ್ತು ಭಾರತಕ್ಕೆ ಆಪರೇಷನ್ ಸಿಂಧೂರ ಯುದ್ಧ ಆರಂಭವಾದ ಹಿನ್ನಲೆ ಸೇನೆಯ ತುರ್ತು ಕರೆಯ ಮೇರಿಗೆ ಮತ್ತೆ ಮರಳಿ
ಕರ್ತವ್ಯಕ್ಕೆ ಹಾಜರಾಗಲು ಜಮ್ಮು ಕಾಶ್ಮೀರಕ್ಕೆ ಹಾಜರಾಗಬೇಕು ನಾನು ಬಹಳ ಉತ್ಸವಕನಾಗಿ ಕರ್ತವ್ಯಕ್ಕೆ ಮರುತ್ತಿದ್ದೇನೆ ನನ್ನ ಭಾರತಾಂಬೆಯ ಸೇಲ್ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಆದ್ದರಿಂದ ಪಾಪಿ ಪಾಕಿಸ್ತಾನದ ಭರತ್ಪಾದಕರನ್ನು ಸೆಲೆಬಡಿಯಲು ನಾನು ಸಿದ್ದಲಿದ್ದೇನೆ ಎಲ್ಲರ ಆಶೀರ್ವಾದ ಸದಾ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿ ಪಾಪಿ ಪಾಕಿಸ್ತಾನ ತನ್ನ ಕುತಂತ್ರದಿಂದ ನರಿ ಬುದ್ದಿ ತೋರಿಸುವ ಮೂಲಕ ಭಾರತದ ಮೇಲೆ ಫೈರಿಂಗ್ ಮಾಡುತ್ತಿದೆ ಆದಕಾರಣ ನಮ್ಮ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಭೀಮಣ್ಣ ಗುರಿಕಾರ ಇವರು ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರನ್ನು ಸದೆ ಬಡೆದು ಗೆದ್ದು ಬರಲಿ ಎಂದು ಶುಭ ಹಾರೈಸಿದರು.
ಇದೇ ಸಮಯದಲ್ಲಿ ಮಾಜಿ ಸೈನಿಕ ಶರಣಯ್ಯ ಹಿರೇಮಠ ಮಾತನಾಡಿ ನಮ್ಮ ದೇಶದ ಸೈನಿಕರು ಭಾರತದ ಗಡಿ ಕಾಯುವದು ಎಂದರೆ ಸಾಮಾನ್ಯವಾದದ್ದು ಎಲ್ಲಾ ಪಾಕಿಸ್ತಾನಿ ಗಳು ಯಾವ ರೀತಿಯಲ್ಲಿ ತೊಂದರೆ ನೀಡುತ್ತಾರೆ ಎಂದರೆ ಸೈನಿಕರ ಗೋಳು ಹೇಳತಿರದು ಆದ್ದರಿಂದ ಈ ದೇಶದ ಯಾವುದೇ ಸೈನಿಕ ಇರಲಿ ಅಥವಾ ನಮ್ಮ ದೇಶದಕ್ಕಾಗಿ ಅನ್ನ ನೀಡುತ್ತೀರುವ ರೈತನಾಗಲಿ ಪ್ರತಿಯೊಬ್ಬರು ಅವರಿಗೆ ಗೌರವವನ್ನು ಕೊಟ್ಟು ಕಾಪಾಡಬೇಕು ಎಂದು ಮತ್ತು ಭೀಮಣ್ಣ ಗುರಿಕಾರ ಇವರಿಗೆ ಪಟ್ಟಣದ ಆರಾಧ್ಯ ದೈವ ದೇವತೆಯಾದ ಶ್ರೀ ಆದಿಶಕ್ತಿ ದ್ಯಾಮಾಂಬಿಕಾ ದೇವಿ ಹಾಗೂ ಭಗವಂತನ ಆಶೀರ್ವಾದ ಸದಾ ಇರಲಿ ಇವರು ಯುದ್ಧದಲ್ಲಿ ಗೆದ್ದು ಬರಲಿ ಎಂದು ಭಾರತದ ಧ್ವಜವನ್ನು ಹಿಡಿದು ಶುಭ ಹಾರೈಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಶಿವಾಜಿ ಹಡಪದ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ , ಎಸ್.ವ್ಹಿ.ಡಾಣಿ, ಉಮೇಶ ಯಾದವ್, ಮಂಜುನಾಥ ಗುರಿಕಾರ, ಪ್ರಭು ಶಂಕರಗೌಡ ಪಾಟೀಲ, ಮಂಜುನಾಥ ನಾಲಗಾರ, ಶರಣಪ್ಪ ಚೂರಿ, ಪರಶುರಾಮ ಚೂರಿ, ಶರಣಪ್ಪ ವಂದಾಲಿ, ಮಂಜುನಾಥ ಕಜ್ಜಿ, ಪರಸಪ್ಪ ಹರಳಿಹಳ್ಳಿ, ಗ್ಯಾನಪ್ಪ ಗುರಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!