ಕುಷ್ಟಗಿ:- ಜೆಜೆಎಂ ಕುಡಿಯುವ ನೀರಿನ ಕಾಮಗಾರಿ ಅತ್ಯಂತ ಮಹತ್ವವಾದ ಯೋಜನೆಯಾಗಿದ್ದು ಈ ಯೋಜನೆಯಲ್ಲಿನ ಕುಡಿಯುವ ನೀರನ್ನು ನಮ್ಮ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡಿ ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಎಚ್ ಪಾಟೀಲ ಹೇಳಿದರು.
ಪಟ್ಟಣದ ಹೊರ ವಲಯದ ಸರ್ಕಿಟ್ ಹೌಸ್ ನಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಬಿಳೆಕಲ್, ಕಲಾಲಬಂಡಿ, ಗುಡ್ಡದ ದೇವಲಾಪೂರ, ಮಿಯಾಪೂರ, ಚಿಕ್ಕಗೊನ್ನಾಗರ, ಹನಮಸಾಗರ, ಹನುಮಗಿರಿ, ಸೇಬಿನಕಟ್ಟಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಇನ್ನು ಕೂಡ ನೀರಿನ ಟ್ಯಾಂಕರ್, ಪೈಪ್ ಲೈನ್ ಕಾಮಗಾರಿ ಸಂಪೂರ್ಣವಾಗಿಲ್ಲ ಮುಗಿದಿಲ್ಲ ಯಾಕೆ ಇಷ್ಟು ತಡವಾಗುತ್ತಿದೆ ಎನ್ನುವದು ಸಂಪೂರ್ಣವಾಗಿ ಹೇಳಬೇಕು ಮತ್ತು ಒಂದು ವಾರದಲ್ಲಿ ಜೆಜೆಎಂ ಕುಡಿಯುವ ನೀರು ಜನರಿಗೆ ತಲುಪುಸದೇ ಹೋದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಂಚಾಯತ ರಾಜ್ ಇಂಜಿನಿಯರ್ ವಿಜಯಕುಮಾರ ಇವರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಂತರ ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಆನಂದ ಗೋಟೂರು ಇವರ ಜೊತೆ ಚೆರ್ಚೆ ಮಾಡಿ ನಮ್ಮ ತಾಲೂಕಿನಲ್ಲಿ ವೈದ್ಯರ ಕೊರತೆ ಬರದಂತೆ ನೋಡಿಕೊಳ್ಳಬೇಕು ಮತ್ತು MBBS ವೈದ್ಯರು ಬಂದರೆ ತಕ್ಷಣ ನೇಮಕ ಮಾಡಿಕೊಳ್ಳಿ, ಸರಕಾರಿ ಆಸ್ಪತ್ರೆಗೆ ಬಂದ ಹೊರ ರೋಗಿ ಇರಲಿ ಅಥವಾ ಹೊಳ ರೋಗಿ ಇರಲಿ ತಕ್ಷಣ ಸ್ಪಂದಿಸಿ ಉತ್ತಮ ನೆಡೆತೆಯಿಂದ ನಡೆದುಕೊಂಡು ಆರೋಗ್ಯವಂತವರನ್ನಾಗಿ ಮಾಡಿ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಲ್ಲಿ ಡೆಂಗ್ಯೂ ಜ್ವರ ಬರದಂತೆ ಎಚ್ಚರವಹಿಸಿ ಜನರಿಗೆ ಜಾಗೃತಿ ಮೂಡಿಸಬೇಕು ಸರಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ ಅದಕ್ಕಾಗಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.
ಕುಷ್ಟಗಿ ಪಟ್ಟಣದಲ್ಲಿ ವಾಹನ ಸವಾರರು ಎಲೆಂದರಲ್ಲಿ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ತಕ್ಷಣ ಪೊಲೀಸ್ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಕಳ್ಳತನ ಪ್ರಕರಣ ಮಹಿಳೆಯರ ಮೇಲೆ ದೌರ್ಜನ್ಯ ಪಕ್ಷದ ಪ್ರಕರಣಗಳು ಹೆಚ್ಚಾಗುತ್ತಿದೆ ಇದರಿಂದ ಪೊಲೀಸರು ಯಾವುದಕ್ಕೂ ಪರಿಹಾರವನ್ನು ಕಂಡುಕೊಂಡಿಲ್ಲ ಮುಂದಿನ ದಿನಮಾನದಲ್ಲಿ ಈ ಒಂದು ಪ್ರಕರಣದ ಬಗ್ಗೆ ಎಚ್ಚೆತ್ತುಕೊಳ್ಳದೆ ಇದ್ದರೆ ಇದಕ್ಕೆ ಪೊಲೀಸರನ್ನೇ ಹೊಣೆಗಾರನಾಗಿ ಮಾಡಲಾಗುವುದು, ಆದ್ದರಿಂದ ಎಚ್ಚರವಹಿಸಿ ಪೊಲೀಸರು ಯಾವುದೇ ಪ್ರಕರಣಗಳು ನೆಡೆಯದಂತೆ ನೋಡಿಕೊಳ್ಳಬೇಕು ಎಂದು ಸಿ.ಪಿ.ಐ ಯಶವಂತ ಬಿಸನಳ್ಳಿ ರವರಿಗೆ ತಿಳಿಸಿದರು.
ನಂತರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜೊತೆ ಮಾತನಾಡಿ ಮಳೆಗಾಲ ಪ್ರಾರಂಭವಾಗಿದ್ದು ತಾಲೂಕಿನ ಅಲ್ಲಲ್ಲಿ ರಸ್ತೆಗಳು ಹದೆಗೆಟ್ಟಿವೆ.ಅವುಗಳನ್ನು ಕೂಡಲೇ ಸರಿಪಡಿಸಬೇಕು. ಅವಶ್ಯ ಇದ್ದಕಡೆ ಟೆಂಡರ್ ಕರೆದು ಸುಗಮ ರಸ್ತೆ ನಿರ್ಮಾಣ ಮಾಡಬೇಕು ಮತ್ತು ತಾಲೂಕಿನ ಶಾಲಾ ಕೊಠಡಿ ಹಾಗೂ ಇನ್ನಿತರೆ ಕಾಮಗಾರಿಯನ್ನು ಕಳಪೆಯಾಗದಂತೆ ಕಟ್ಟಡವನ್ನು ನಿರ್ಮಾಣ ಮಾಡಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿ ಜೊತೆ ಚೆರ್ಚೆ ನೆಡೆಸಿ ರೈತರಿಗೆ ರಸ ಗೊಬ್ಬರ, ಬಿತ್ತನೆ ಬೀಜ, ಸಬ್ಸಿಡಿ ರೂಪದಲ್ಲಿ ತಾಡಪತ್ರೆ, ಪೈಪ್ ಸೇರಿದಂತೆ ಸರಕಾರದ ಯೋಜನೆಯನ್ನು ರೈತರಿಗೆ ತಲುಪಿಸಬೇಕು ಎಂದರು.
ಸಿ.ಡಿ.ಪಿ.ಓ ಯಲ್ಲಮ್ಮ ಅಂಡಗಿ ಜೊತೆಗೆ ಚೆರ್ಚೆ ಮಾಡಿ ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಕಳಪೆ ಆಹಾರವನ್ನು ಪೂರೈಕೆ ಮಾಡಬಾರದು ಒಂದು ವೇಳೆ ಮಾಡಿದ್ದು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಸರಕಾರಿ ಇಲಾಖೆ ಅಧಿಕಾರಿಗಳ ಜೊತೆ ಚೆರ್ಚೆ ಮಾಡಿ ತಾಲೂಕಿನ ಅಭಿವೃದ್ಧಿ ಬಗ್ಗೆ ಚರ್ಚೆ ನೆಡೆಸಿದರು.
ಸಭೆ ಪ್ರಾರಂಭಕ್ಕು ಮುನ್ನ
ತ್ರೈಮಾಸಿಕ ಕೆ.ಡಿ.ಪಿ ಸದಸ್ಯರಾದ ಶ್ಯಾಮರಾವ್, ಯಲ್ಲಪ್ಪ ಬಾಗಲಿ, ಹನಮಗೌಡ ಪಾಟೀಲ, ಅನ್ವರ್ ಅತ್ತಾರ್, ಟಿ.ಎ.ಪಿ.ಸಿ. ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಅನುಪಾಲನೆ ವರದಿ ಪಾಲನೆ ಮಾಡದ ಅಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯತ ಇಒ ಇವರಿಗೆ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಹಶಿಲ್ದಾರ ಶೃತಿ ಎಂ, ತಾಲೂಕು ಪಂಚಾಯತ ಇಒ, ಸೇರಿದಂತೆ ಸರಕಾರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.