ಕೊಪ್ಪಳ, ನ. ೧೭: ಕ್ಷೇತ್ರದ ವಾಲ್ಮೀಕಿ ಸಮುದಾಯಕ್ಕೆ ಸದಾ ಋಣಿಯಾಗಿದ್ದು, ಸಿದ್ದರಾಮಯ್ಯ ಅವರ ಸರಕಾರದಲ್ಲಿ ನೀಡಿದ ಸೌಲಭ್ಯಗಳನ್ನು ಪುನಃ ಆರಂಭಿಸುವ ಕೆಲಸ ಮಾಡಲಾಗುವದು ಎಂದು ಶಾಸಕ ಕೆ.ರಾಘವೆಂದ್ರ ಹಿಟ್ನಾಳ ಹೇಳಿದರು.
ಅವರು ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣದ ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ಎರಡು ದೊಡ್ಡ ವಾಲ್ಮೀಕಿ ಭವನಕ್ಕೆ ಸುಮಾರು ನಾಲ್ಕು ಕೋಟಿ ಅನುದಾನ ದೊರಕಿಸಿ ಕೊಡಲಾಗಿದೆ, ಅವು ಸಮುದಾಯದ ಆಸ್ತಿಗಳು ಎಂದ ಅವರು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಸ್.ಸಿ. ಎಸ್.ಟಿ ಸಮುದಾಯಕ್ಕೆ ನೇರ ಫಲಾನುಭವಿಗಳಿಗೆ ಹೆಚ್ಚಿನ ಸಹಾಯಧನ ಕೊಡಲಾಗುತ್ತಿತ್ತು ಬಿಜೆಪಿ ಸರಕಾರ ಅವುಗಳನ್ನು ಕಿತ್ತುಕೊಂಡಿದೆ ಆದ್ದರಿಂದ ಅವುಗಳನ್ನು ಪುನಃ ಆರಂಭಿಸಿ ಪರಿಶಿಷ್ಟ ಜಾತಿ ಪಂಗಡಗಳ ಯುವಕರನ್ನು ಮುಂದೆ ತರಲಾಗುವದು ಎಂದರು.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಕಾಟ್ರಳ್ಳಿ ಮೆರವಣಿಗೆಯ ವಾಲ್ಮೀಕಿ ರಥಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ವಿಜೃಂಭಣೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತದವರೆ ಡಿಜೆ ಯೊಂದಿಗೆ ಯುವಕರು ಹೆಜ್ಜೆ ಹಾಕಿದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಉಪನ್ಯಾಸ ನೀಡಿ ಮಾತನಾಡುತ್ತ, ಆದಿಕವಿ ಮಹರ್ಷಿ ವಾಲ್ಮೀಕಿಯು ರಾಮಾಯಣವನ್ನು ರಚಿಸಿ ಎಲ್ಲರಿಗೂ ಸರಿಯಾದ ಮಾರ್ಗದಲ್ಲಿ ನಡೆಯುವ ದಾರಿಯನ್ನು ತೋರಿಸಿದರು. ಪವಿತ್ರ ಪುಸ್ತಕ ರಾಮಾಯಣದಲ್ಲಿ ಪ್ರೀತಿ, ತ್ಯಾಗ, ದೃಢತೆ ಮತ್ತು ಭ್ರಾತೃತ್ವದ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ವಾಲ್ಮೀಕಿ ಅವರ ಬಗ್ಗೆ ಇಲ್ಲದ ಸುಳ್ಳುಗಳನ್ನು ಹೇಳಿದ್ದಾರೆ ಹಾಗೂ ಮೂಲ ರಾಮಾಯಣದಲ್ಲಿ ಇಲ್ಲದ ಸಂಗತಿ ಮತ್ತು ಕಾಂಡಗಳನ್ನು ಸೇರಿಸಿ ಕೋದಂಡ ರಾಮನನ್ನು ಶ್ರೀರಾಮನನ್ನಾಗಿ ಮಾಡಿದ್ದಾರೆ. ರಾಮ ಲಕ್ಷö್ಮಣ ಹನುಮ ಸೀತೆ ಲವಕುಶಹೀಗೆ ಎಲ್ಲರನ್ನು ಪರಿಚಯಿಸಿದ ವಾಲ್ಮೀಕಿ ಮತ್ತು ಸಮುದಾಯ ಯಾರಿಗೂ ಬೇಡವಾಗಿದೆ, ಅಯೋಧ್ಯಯಲ್ಲಿಯೇ ವಾಲ್ಮೀಕಿಯ ದೇವಸ್ಥಾನ ಮಾಡಬೇಕಿತ್ತು ಅದನ್ನು ಮಾಡಿಲ್ಲ. ನಮ್ಮ ಅನುದಾನ ಕಿತ್ತುಕೊಂಡು ಸರಕಾರಮೋಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಕೆ.ಎಮ್.ಸೈಯದ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ದೇವಪ್ಪ ಮೇಕಾಳಿ ಮತ್ತು ಬಾಲಚಂದ್ರ ಮುನಿರಾಬಾದ್, ವೈ ರಮೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಯಮನೂರಪ್ಪ ಕುಣಿಕೇರಿ, ಸದಸ್ಯರಾದ ಚನ್ನಕೃಷ್ಣ ಗೊಲ್ಲರ, ಯಮನೂರಪ್ಪ ವಡ್ಡರ, ರಂಗನಾಥ, ಹನುಮಂತಪ್ಪ ಕರಡಿ, ಆಂಜನೇಯ, ಮುಖಂಡರಾದ ಬಾಷುಸಾಬ ಗೊರೆಬಾಳ, ನಿಂಗಪ್ಪ ಹ್ಯಾಟಿ, ಬಾಬು ಸೇವಾ ಸಮಿತಿ ಅಧ್ಯಕ್ಷ ವೀರೇಶ ಮುದಗಲ್, ಉಪಾಧ್ಯಕ್ಷ ನಿಂಗಪ್ಪ ಲಿಂಗದಳ್ಳಿ, ಕಾರ್ಯದರ್ಶಿ ಧರ್ಮಣ್ಣ ಹಟ್ಟಿ, ಖಜಾಂಚಿ ತಿಮ್ಮಣ್ಣ ಗೊನ್ವಾರ, ಸದಸ್ಯರಾದ ಸೋಮನಾಥ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Gadi Kannadiga > State > ವಾಲ್ಮೀಕಿ ಸಮುದಾಯಕ್ಕೆ ಸದಾ ಋಣಿಯಾಗಿರುವೆ : ಶಾಸಕ ಹಿಟ್ನಾಳ