ಕೊಪ್ಪಳ: ನಗರದ ಹೊರವಲಯದ ಸಿಂಧೋಗಿ ರಸ್ತೆಯಲ್ಲಿರುವ ಆಶ್ರಯ ಮನೆಗಳನ್ನು ಪೂರ್ಣಗೊಳಿಸಿ, ಕೊಪ್ಪಳ ಜನತೆಗೆ ಒದಗಿಸುವುದೇ ನನ್ನ ಗುರಿ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಕೊಪ್ಪಳ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತ ಪ್ರಚಾರ ನಡೆಸಿದ ಅವರು, ರಾಘವೇಂದ್ರ ಹಿಟ್ನಾಳ್ ಶಾಸಕರಾಗಿ ೧೦ ವರ್ಷ ಅಧಿಕಾರ ನಡೆಸಿದರೂ, ಸಿಂಧೋಗಿ ರಸ್ತೆಯ ಆಶ್ರಯ ಮನೆಗಳನ್ನು ಪೂರ್ಣಗೊಳಿಸಲಾಗಲಿಲ್ಲ. ಅವರು ಸಂಪೂರ್ಣ ವಿಫಲರಾಗಿದ್ದು, ಇಂತಹವರು ಶಾಸಕರಾಗಬೇಕೆ? ಜನತೆಗೆ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರ ಕಮಲದ ಚಿನ್ಹೆಗೆ ಮತ £Ãಡಿ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಆಶ್ರಯ ಮನೆಗಳನ್ನು ಪೂರ್ಣಗೊಳಿಸಿ ಕೊಪ್ಪಳದ ಜನತೆಗೆ £Ãಡುತ್ತೇನೆ. ಇದು ನನ್ನ ಭರವಸೆಯಲ್ಲ, ಕರ್ತವ್ಯವಾಗಿದೆ. ಮತ ಕೇಳುವಾಗ ಹಿಟ್ನಾಳ್ ಸುಳ್ಳು ಭರವಸೆ £Ãಡಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿ ಶೂನ್ಯ ವಾಗಿದೆ. ಹಿಟ್ನಾಳ್ ಮನೆಗೆ ಕಳುಹಿಸಿ, ಕಮಲಕ್ಕೆ ಮತ ಹಾಕಿ ಮಂಜುಳಾ ಕರಡಿಯನ್ನು ವಿಧಾನಸಭೆ ಗೆ ಕಳುಹಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾಗಿ ಯಂತ್ರೋಪಕರಣಗಳು ಇಲ್ಲ ಹಾಗೂ ಸಿಬ್ಬಂದಿಯೂ ಇಲ್ಲ. ಗ್ರಾಮಗಳಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಪ್ರಾಥಮಿಕ ಕೇಂದ್ರ ಕ್ಕೆ ಹೋದರೆ, ಕೊಪ್ಪಳ ನಗರಕ್ಕೆ ಕಳುಹಿಸಲಾಗುತ್ತಿದೆ. ಹತ್ತು ವರ್ಷ ಶಾಸಕರಾದರಿಗೆ ಆರೋಗ್ಯ ಕೇಂದ್ರಗಳು ಕಣ್ಣಿಗೆ ಕಾಣಲಿಲ್ಲವೇ? ಸಿಬ್ಬಂದಿ ನೇಮಿಸುವಷ್ಟು ಸಮರ್ಥರಲ್ಲವೇ? ಹತ್ತು ವರ್ಷ ಆಡಳಿತ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಹಳ್ಳಿಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪ್ರಚಾರಕ್ಕೆ ಹೋದ ಶಾಸಕರನ್ನು ಪ್ರತಿ ಹಳ್ಳಿಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದಕ್ಕಾಗಿಯೇ ಅವರು ಹಳ್ಳಿಗಳಲ್ಲಿ ಮನೆ ಮನೆಗೆ ತೆರಳದೇ ಹಳ್ಳಿಯಲ್ಲಿ ಸಭೆ ನಡೆಸಿ ಹಿಂದಿರುಗುತ್ತಿದ್ದಾರೆ. ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದರೆ, ಮನೆ ಮನೆಗೆ ಭೇಟಿ £Ãಡಿ ಪ್ರಚಾರ ಮಾಡಬಹುದಿತ್ತಲ್ಲವೇ? ಇದೀಗ ಮಾದರಿ ಕ್ಷೇತ್ರ ಮಾಡುವೆ ಮತ್ತೊಮ್ಮೆ ಗೆಲ್ಲಿಸಿ ಎಂದು ಮತ ಕೇಳುತ್ತಿದ್ದಾರೆ. ಎರಡು ಬಾರಿ ಗೆದ್ದಿರಲ್ಲ ಏಕೆ ಮಾದರಿ ಕ್ಷೇತ್ರವನ್ನಾಗಿ ಮಾಡಲಿಲ್ಲ? ಹತ್ತು ವರ್ಷ £Ãವು ಮಾಡಿದ್ದಾದರೂ ಏನು? ಕೊಪ್ಪಳ ಜನತೆಗೆ ಮೋಸ ಮಾಡಿದ್ದೀರಿ. ಆದ್ದರಿಂದ ಜನತೆ ಶಾಸಕರ ದುರಾಡಳಿತಕ್ಕೆ ಅಂತ್ಯ ಕಾಣಬೇಕು. ಕಮಲದ ಚಿನ್ಹೆಗೆ ಮತ ಹಾಕಿ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿ ಪಕ್ಷವನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಶಾಸಕರು ಮಹಿಳೆಯರ ಸಮಸ್ಯೆ ಆಲಿಸುವಲ್ಲಿ £ರ್ಲಕ್ಷ÷್ಯ ವಹಿಸಿದ್ದಾರೆ. ಆದ್ದರಿಂದ ಮಹಿಳೆಯರು ಬಿಜೆಪಿಗೆ ಮತ £Ãಡಲು £ರ್ಧರಿಸಿದ್ದಾರೆ. ಬಿಜೆಪಿಗೆ ಮತ £Ãಡಿ ನನ್ನನ್ನು ಗೆಲ್ಲಿಸಿದರೆ, ವಾರದ ೨೪ ಗಂಟೆಯೂ ಜನಸೇವೆ ನಾನು ಸಿದ್ಧಳಿದ್ದೇನೆ. ಮಹಿಳೆಯರು ಯಾವಾಗಬೇಕಾದರೂ ಬಂದು ತಮ್ಮ ಸಮಸ್ಯೆ ತಿಳಿಸಬಹುದು. ಕ್ಷೇತ್ರದ ಜನತೆ ಒಂದು ಬಾರಿ ಅವಕಾಶ £Ãಡಿ ಎಂದರು
Gadi Kannadiga > Local News > ಸಿಂಧೋಗಿ ರಸ್ತೆಯ ಆಶ್ರಯ ಮನೆಗಳನ್ನು ಪೂರ್ಣಗೊಳಿಸುವಲ್ಲಿ ಶಾಸಕ ಹಿಟ್ನಾಳ್ ವಿಫಲ ಆಶ್ರಯ ಮನೆ ಕೊಪ್ಪಳ ಜನತೆಗೆ ನೀಡುವುದೇ ನನ್ನ ಗುರಿ: ಸಂಗಣ್ಣ
ಸಿಂಧೋಗಿ ರಸ್ತೆಯ ಆಶ್ರಯ ಮನೆಗಳನ್ನು ಪೂರ್ಣಗೊಳಿಸುವಲ್ಲಿ ಶಾಸಕ ಹಿಟ್ನಾಳ್ ವಿಫಲ ಆಶ್ರಯ ಮನೆ ಕೊಪ್ಪಳ ಜನತೆಗೆ ನೀಡುವುದೇ ನನ್ನ ಗುರಿ: ಸಂಗಣ್ಣ
Suresh05/05/2023
posted on
