This is the title of the web page
This is the title of the web page

Please assign a menu to the primary menu location under menu

State

ಪತ್ರಕರ್ತರ ಸಂಘದ ಕಾರ್ಯ ರಾಜ್ಯದಲ್ಲಿಯೇ  ಮಾದರಿಯಾಗಿದೆ : ಶಾಸಕ ಎಚ್. ವೈ. ಮೇಟಿ       


ಬಾಗಲಕೋಟೆ -ಜು.30- ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಸಮಿತಿಯಿಂದ ಇಂದು ಬಾಗಿಲಕೋಟೆ ಜಿಲ್ಲೆಯ ನವನಗರದ ಅಕ್ಷಯ್ ಇಂಟರ್ನ್ಯಾಷನಲ್ ಹೋಟೆಲ್ ಸಭಾಗ್ರಹದಲ್ಲಿ  ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬಾಗಿಲಕೋಟೆ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿ ನಡೆಸಿಕೊಟ್ಟಿದೆ.   ಸಭೆಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸಾಮೀಜಿಗಳು ವಹಿಸಿದ್ದರು.  ಕಾರ್ಯಕ್ರಮಮದ ಮುಖ್ಯಅಥಿತಿಗಳಾಗಿ ಬಾಗಲಕೋಟೆಯ ಶಾಸಕರಾದ ಎಚ್ .ವೈ . ಮೇಟಿಯವರು ಆಗಮಿಸಿ ಸಮಾರಂಭವನ್ನ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟ, ಪತ್ರಕರ್ತರ ಕೆಲಸ ತುಂಬಾ ಕ್ಲಿಷ್ಟ,  ಸಮಾಜದ ಮತ್ತು ದೇಶದ ಬದಲಾವಣೆಯಲ್ಲಿ ಪತ್ರಿಕಾಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ,  ಸಂಘದ ಮತ್ತು ಪತ್ರಕರ್ತರ ಎಲ್ಲಾ ಸಹಕಾರ ಸಹಾಯವನ್ನ ಸರ್ಕಾರದ ಮುಖಾಂತರ ಮಾಡುತ್ತೇನೆ ಈ ಕುರಿತು ಮುಖ್ಯ ಮಂತ್ರಿಗಳಲ್ಲಿ ಮಾತಾನಾಡುತ್ತೇನೆ.  ಪತ್ರಕರ್ತರ ಕಲ್ಯಾಣಕ್ಕಾಗಿ ಶ್ರಮಿಸುವ ಸಮಾರಂಭ ಯಶಸ್ವಿಯಾಗಲಿ ಎಂದು ಹೇಳಿದರು.
               ಸಮಾರಂಭದ ಅಧ್ಯಕ್ಷತೆಯನ್ನ ಮುರುಗೇಶ ಶಿವಪೂಜಿ ವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿ ಸಂಘವು ಪ್ರಾರಂಭದಿಂದಲೂ  ಸರ್ಕಾರ ಮತ್ತು ಯಾರಿಂದಲೂ ಸಹಾಯ ನಿರೀಕ್ಷೆಮಾಡದೆ ಸದಸ್ಯರಿಗೆ ಮಾಡುತ್ತಿರುವ ಸಹಾಯಗಳನ್ನ ತಿಳಿಸಿದರು, ಸಂಪಾದಕರು ಮತ್ತು ವಾರದಿಗಾರರಾಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೂ 4 ಲಕ್ಷ ರೊ ವಿಮೆ ಮತ್ತು ಸ್ವಾಭಾವಿಕ ಅನಾರೋಗ್ಯದ ಸಂದರ್ಭದಲ್ಲಿ ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.      ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ ವ್ಯಕ್ತಿಯ ವಿಶೇಷ ಬೆಳವಣಿಗೆಯನ್ನು ಪತ್ರಿಕೆ ಮಾಡುತ್ತಿದೆ,  ಗ್ರಾಮೀಣ ಭಾಗದ ಪತ್ರಕರ್ತರನ್ನ ಗುರುತಿಸಿ ಅವರಿಗೆ ವಿಶೇಷ ಸಹಾಯ ಮಾಡುತ್ತಿರುವ ಪ್ರಥಮ ಏಕೈಕ ಸಂಘ ಕರ್ನಾಟಕ ಪತ್ರಕರ್ತರ ಸಂಘ, ಈ ಕೆಲಸ ಉಳಿದ ಸಂಘಗಳಿಗೆ ಮಾದರಿಯಾಗಬೇಕು, ಪತ್ರಕರ್ತರು ಒಳ್ಳೆಯ ಮನಸ್ಥಿತಿ ಇಟ್ಟುಕೊಂಡು ಕೆಲಸ ಮಾಡಬೇಕು,   ಇವರ ಜವಾಬ್ದಾರಿ ಮಹತ್ವದ್ದಾಗಿದೆ, ಸಮಾಜದಲ್ಲಿ  ಶಾಂತಿ ಮೋಡಿಸುವ ಕೆಲಸವನ್ನು ಮಾಡಬೇಕು, ಸಮಾಜಕ್ಕೆ ಒಳ್ಕೆಯದಾಗಿಸುವ ಮತ್ತು ಒಳ್ಳೆಯದನ್ನು ಮಾಡುತ್ತಿರುವ ವ್ಯಕ್ತಿಗಳನ್ನ ಮಾಡಬೇಕು. ಪತ್ರಕರ್ತ ರಿಗೆ ಇರುವ ಕಷ್ಟಗಳನ್ನು ಪ್ರತಿಬಿಂಬಿಸಿ ಅವುಗಳನ್ನು ನಿವಾರಿಸುವ ಕಾರ್ಯವನ್ನು ಕರ್ನಾಟಕ ಪತ್ರಕರ್ತರ ಸಂಘ ಮಾಡಲಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಯಶಸ್ಸಿ ಘಟಕದ ರಾಜ್ಯ ಸಂಚಾಲಕ ಶ್ರವಣ್ ಕುಮಾರ್ ಧರನಾಯಕ್ ಮತ್ತು ಯುವ ಉದ್ಯಮಿ ಸಂತೋಷ್ ಅತಿಥಿಗಳಾಗಿ ಭಾಗವಹಿಸಿದ್ದರು.
   ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಸುದೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ  ಸಂಪತಕುಮಾರ ಮುಚಳಂಬಿ, ರಾಜ್ಯ ಕಾರ್ಯದರ್ಶಿ ಸೊಂಡೂರು ಗೋಪಾಲ್, ಬಾಗಲಕೋಟೆ ಜಿಲ್ಲಾಧ್ಯಕ್ಷ ವಿಜಯ ಶಂಕರ್ ಮತ್ತು ಪ್ರಧಾನ ಕಾರ್ಯದರ್ಶಿ ದಾನಯ್ಯ ಹಿರೇಮಠ, ಕೊಪ್ಪಳ ಜಿಲ್ಲಾಧ್ಯಕ್ಷ ಶರಣಪ್ಪ ಗುಮಗೇರಾ, ಬಳ್ಳಾರಿ ಜಿಲ್ಲಾಧ್ಯಕ್ಷ ಅರುಣ್ ಭೂಪಾಲ್ , ವಿಜಯನಗರ ಜಿಲ್ಲಾಧ್ಯಕ್ಷ ಬಿ ಎಚ್ಲ್ ಎಸ್ ರಾಜು, ಚಾಮರಾಜನಗರ ಜಿಲ್ಲಾಧ್ಯಕ್ಷ ಬಂಗಾರಪ್ಪ, ಗದಗ್ ಜಿಲ್ಲಾಧ್ಯಕ್ಷ ರಮೇಶ್ ಭಜಂತ್ರಿ, ವಿತರಕರ ಸಂಘದ ಅಧ್ಯಕ್ಷ ಶಂಕರ್ ಕುದುರಿಮೋತಿ, ಬೆಂಗಳೂರು ಜಿಲ್ಲಾ ಸಂಚಾಲಕ ದತ್ತಾತ್ರೇಯ ಹೆಗಡೆ, ರಾಮನಗರ ಜಿಲ್ಲೆಯ ಸಂಚಾಲಕ ಪ್ರಕಾಶ್, ಟ್ರಸ್ಟಿ ಬಸವರಾಜ್ ಪುಟ್ಟಿ ಹಾಗೂ ವಿವಿಧ ೨೦ ಜಿಲ್ಲೆಗಳ ಪ್ರಧಾನ ಕಾರ್ಯದರ್ಶಿಗಳು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಪ್ರಾರಂಭದಲ್ಲಿ ಬಾಗಿಲಕೋಟೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ ಬಿ ವಿಜಯಶಂಕರ್ ಸ್ವಾಗತಿಸಿದರು, ನಾಗರಾಜ್ ನಗರಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply