This is the title of the web page
This is the title of the web page

Please assign a menu to the primary menu location under menu

Local News

75 ಸಾವಿರ ರೂ.ಗಳ ಖಾದಿ ಧ್ವಜ ಖರೀದಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್


 
ಬೆಳಗಾವಿ – ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 75 ಸಾವಿರ ರೂ.ಗಳ ಖಾದಿ ಧ್ವಜಗಳನ್ನು ಖರೀಸಿದಿಸಿ ಸಾರ್ವಜನಿಕರಿಗೆ ಹಂಚಿದ್ದಾರೆ.
ಹುಬ್ಬಳ್ಳಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ತಯಾರಿಸಲಾಗಿರುವ ರಾಷ್ಟ್ರ ಧ್ವಜವನ್ನು, ಕೇಂದ್ರದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಮಹಾಂತೇಶ ವೀ. ಮತ್ತಿಕೊಪ್ಪ ಇವರ ಮುಖಾಂತರ ಲಕ್ಷ್ಮೀ ಹೆಬ್ಬಾಳಕರ್ ಅವರು ಖರೀದಿಸಿದರು. ಮತ್ತಿಕೊಪ್ಪ ಅವರು ಲಕ್ಷ್ಮೀ ಹೆಬ್ಬಾಳಕರ್ ಅವರ ಕಚೇರಿಗೆ ಆಗಮಿಸಿ ಧ್ವಜಗಳನ್ನು ಹಸ್ತಾಂತರಿಸಿದರು.
 ಪಾಲಿಸ್ಟರ್ ಬಟ್ಟೆಯ ಧ್ವಜ ಹಂಚುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಯನ್ನು ಖಂಡಿಸಿ, ಸ್ವದೇಶಿ ನಿರ್ಮಿತ ಧ್ವಜಗಳನ್ನು ಖರೀದಿಸಿರುವುದಾಗಿ ತಿಳಿಸಿದ ಅವರು, ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವದೇಶಿ ನಿರ್ಮಿತ ಖಾದಿ ಧ್ವಜಗಳನ್ನೇ ಬಳಕೆ ಮಾಡಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Gadi Kannadiga

Leave a Reply